ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮಾತೇ ನಮಗೆ ವೇದವಾಕ್ಯ: ಅವರೇಳಿದ್ದನ್ನ ಮಾಡಿಯೇ ತೀರುತ್ತೇವೆ: ಸಿಎಂ ಯಡಿಯೂರಪ್ಪ
ಬೆಂಗಳೂರು: ನಿಜವಾಗಲೂ ಇದು ಸಂಭ್ರಮಾಚರಣೆಯ ಸಮಯ. ಪ್ರಧಾನಿ ನರೇಂದ್ರ ಮೋದಿ ಎರಡನೇಯ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಡೀ ಜಗತ್ತೇ ಬೆರಗಾಗಿ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡುವ ಮುನ್ನ ಪಕ್ಷದ ಮುಖಂಡರನ್ನ ಉದ್ದೇಶಿಸಿ ಸಿಎಂ ಮಾತನಾಡುತ್ತಿದ್ದರು. ಇಡೀ ವಿಶ್ವದಲ್ಲೇ ಅಗ್ರಗಣ್ಯ ನಾಯಕ ಎನಿಸಿಕೊಂಡಿದ್ದಾರೆ. ವಸುದೈವ ಕುಟುಂಬಕಂ, ಸಬ್ ಕೆ ಸಾತ್ ಸಬ್ ಕಾ ವಿಕಾಸ್‌ನ್ನು ಜಾರಿಗೆ ತಂದಿದ್ದಾರೆ. ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಮೋದಿಯವರು ಕೈಗೊಂಡ ನಿರ್ಣಯಗಳು ನಿರ್ಣಾಯಕಗಳಾಗಿವೆ. ಮೋದಿಯವರ ಸಲಹೆಯಂತೆ ಇಡೀ ದೇಶವೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿನಿಂತಿದೆ ಎಂದರು.
ದೇಶದಲ್ಲಿ ಕೊರೋನಾ ವಿರುದ್ದದ ಸಮರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಮೂರು ಹಂತದ ಪ್ಯಾಕೇಜ್‌ಗಳನ್ನು ಘೋಷಿಸಿದ್ದೇವೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳುವ ಪ್ರತಿ ಮಾತನ್ನೂ ನಾವು ಜಾರಿಗೆ ತರುತ್ತೇವೆ ಮತ್ತೂ ಪಾಲಿಸುತ್ತೇವೆ ಎಂದು ಹೇಳಿದರು.