ಚೀನಾಗೆ ಬುದ್ಧಿ ಕಲಿಸಬೇಕಾದ್ರೇ ಸ್ವದೇಶಿ ವಸ್ತು ಬಳಸಬೇಕು:ಸಿ.ಟಿ.ರವಿ

ಬೆಂಗಳೂರು: ಚೀನಾ ಕಾಲು ಕೆರೆದು ಜಗಳ ಮಾಡ್ತಿದೆ. ಚೀನಾ ವಿಶ್ವಾಸಾರ್ಹ ಅಲ್ಲ ಎಂದು ಮತ್ತೆ ಮತ್ತೆ ಸಾಬೀತಾಗಿದೆ. ಗಾಂಧೀಜಿಯವರ ಸ್ವದೇಶಿ ಮಂತ್ರದ ಮೂಲಕ ನಾವು ಮುಂದಾಗಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಸಚಿವ ಸಿ.ಟಿ.ರವಿ ಮನವಿ ಮಾಡಿಕೊಂಡರು.
ಪ್ರತಿಯೊಬ್ಬ ಭಾರತೀಯನು ಯೋಧನ ರೀತಿ ಯೋಚಿಸಬೇಕು. ಆಗ ಭಾರತೀಯ ಯೋಧರ ಬಲಿದಾನ ಸಾರ್ಥಕವಾಗುತ್ತದೆ. ಕಾಂಗ್ರೆಸ್ ಪ್ರಧಾನಿ ಬಗ್ಗೆ ಮಾತಾಡೋದು ಅವರು ನಾಚಿಕೆ ಪಟ್ಟುಕೊಳ್ಳಬೇಕಾದ ವಿಚಾರ. ಇಡೀ ದೇಶ ಒಂದಾಗಿ ಯೋಚಿಸುತ್ತಿರುವಾಗ ಕಾಂಗ್ರೆಸ್ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದ್ಕೊಂಡಿರಲಿಲ್ಲ. ಕಾಂಗ್ರೆಸ್ ರಾಜಕೀಯ ಮಾಡಿದರೆ ಹಿಂದಿ ಚೀನೀ ಭಾಯಿ ಭಾಯಿ ಅಂತ ಹೇಳಿದ್ದರ ಬಗ್ಗೆಯೂ ಮಾತಾಡಬೇಕಾಗುತ್ತದೆ. ಚೀನಾ ಸೈನ್ಯದಲ್ಲಿ ನಮ್ಮಿಂದ ಬಲ ಇರಬಹುದು, ಆದರೆ ಆತ್ಮ ವಿಶ್ವಾಸ ದಲ್ಲಿ ಭಾರತ ಅವರಿಗಿಂತ ಬಲಶಾಲಿಯಾಗಿದೆ. ಆತ್ಮವಿಶ್ವಾಸ ಕುಗ್ಗಿಸುವ ಯಾವುದೇ ಹೇಳಿಕೆಗಳು ದೇಶ ವಿರೋಧಿಯಾಗುತ್ತದೆ ಎಂದು ಕಾಂಗ್ರೆಸ್ಸನ್ನ ತರಾಟೆಗೆ ತೆಗೆದುಕೊಂಡರು.