ಪಕ್ಷದ ನಿಷ್ಠೆಗೆ ಒಲಿದು ಬಂದ ಪದವಿ: ತಿಪ್ಪಣ್ಣ ಮಜ್ಜಗಿಗೆ ಶೆಟ್ಟರರಿಂದ ಸತ್ಕಾರ
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ತನ್ನ ಕಾರ್ಯಕರ್ತರನ್ನ ಯಾವತ್ತೂ ಕೈ ಬಿಡೋದಿಲ್ಲ ಎಂದು ಮತ್ತೋಮ್ಮೆ ಸಾಬೀತು ಮಾಡಿದೆ. ಸದಾಕಾಲ ಪಕ್ಷದ ಬೆಳವಣಿಗೆಗಾಗಿ ದುಡಿಯುವ ತಿಪ್ಪಣ್ಣ ಮಜ್ಜಗಿ ಅವರಿಗೆ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಹಾನಗರ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದೆ.
ಪಾಲಿಕೆಯ ಮಾಜಿ ಸದಸ್ಯ ತಿಪ್ಪಣ್ಣ ಮಜ್ಜಗಿ ಈ ಹಿಂದೆ ಸೆಂಟ್ರಲ್ ಕ್ಷೇತ್ರದಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಅದಾದ ಮೇಲೆ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಇಂತಹ ಸಮಯದಲ್ಲೂ ತಿಪ್ಪಣ್ಣ ಮಜ್ಜಗಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಲಿಲ್ಲ. ಪಕ್ಷದ ಸಲವಾಗಿಯೇ ನಿರಂತರವಾಗಿ ದುಡಿಯುತ್ತಿದ್ದರು. ಇದೀಗ ಮತ್ತೆ ಅವರಿಗೆ ಹುದ್ದೆ ನೀಡಲಾಗಿದ್ದು, ಪಕ್ಷಕ್ಕೆ ಮತ್ತಷ್ಟು ಹುರುಪು ಸಿಗಲಿದೆ.
ಪ್ರಧಾನ ಕಾರ್ಯದರ್ಶಿಯಾಗಿರುವ ತಿಪ್ಪಣ್ಣ ಮಜ್ಜಗಿ ಅವರನ್ನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸತ್ಕರಿಸಿದರು. ಪೇಟ್ ತೊಡಿಸಿ, ಹೂಮಾಲೆ ಹಾಕಿ ಶೆಟ್ಟರ ಹರಸಿದರು. ತಿಪ್ಪಣ್ಣ ಮಜ್ಜಗಿಯವರು ಜಗದೀಶ ಶೆಟ್ಟರ ಕಾಲು ಮುಗಿದು ಆಶೀರ್ವಾದ ಪಡೆದರು.