ಕಿಮ್ಸ್ ನಲ್ಲಿ ಎರಡನೇ ವೈರಾಲಜಿ ಪ್ರಯೋಗಾಲಯ: ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಅಧಿಕ ತಪಾಸಣೆ ಸಾಮರ್ಥ್ಯ – ಸಚಿವ ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಕಿಮ್ಸ್ ನಲ್ಲಿ ಎರಡನೇ ವೈರಾಲಜಿ ಪ್ರಯೋಗಾಲಯ ಕಾರ್ಯಾರಂಭ ಮಾಡಿದ್ದು ಇದು ಜಿಲ್ಲೆಯ ನಾಲ್ಕನೆಯ ಕೋವಿಡ್ ತಪಾಸಣೆ ಪ್ರಯೋಗಾಲವಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಜನರ ತ್ವರಿತ ತಪಾಸಣೆ ಸಾಮರ್ಥ್ಯದ ಪ್ರಯೋಗಾಲಯಗಳಿವೆ. ಕೇಂದ್ರ ಮತ್ತು ಮಾರ್ಗಸೂಚಿಗಳ ಅನುಸಾರ ತಪಾಸಣೆ ಕಾರ್ಯ ಮುಂದುವರೆಯಲಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ನಲ್ಲಿ ಇಂದು ಎರಡನೇ ವೈರಾಲಜಿ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ತಪಾಸಣೆಗೆ ಒಳಪಡಿಸಿದ 24 ಗಂಟೆಗಳೊಳಗೆ ವರದಿ ಪಡೆಯಲು ಸಾಧ್ಯವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಮತ್ತು ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಹೆಚ್ಚು ಪ್ರಯೋಗಾಲಯ ಸ್ಥಾಪನೆ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು.ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಎನ್ ಡಿ ಆರ್ ಎಫ್ ಅನುದಾನದಲ್ಲಿ ಹೊಸ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಕಿಮ್ಸ್ ನಲ್ಲಿ ಎರಡು, ಡಿಮ್ಹಾನ್ಸ್ ಹಾಗೂ ಎನ್ ಎಮ್ ಆರ್ ಕೇಂದ್ರದಲ್ಲಿ ತಲಾ ಒಂದು ಪ್ರಯೋಗಾಲಗಳಿವೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳು ಮತ್ತು ನಿರ್ದೇಶನದಂತೆ ಕೋವಿಡ್ ತಪಾಸಣೆ ಮುಂದುವರೆಯುತ್ತದೆ ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿಯಿಂದ ಗುಣಮುಖರಾದ ವ್ಯಕ್ತಿಗೆ ಪುಷ್ಪಗುಚ್ಛ ನೀಡಿ ಬೀಳ್ಕೊಡಲಾಯಿತು. ಬ್ಯಾಂಕ್ ಆಫ್ ಬರೋಡಾ ನೀಡಿರುವ ಬ್ಯಾಟರಿ ಚಾಲಿತ ಆಂಬುಲೆನ್ಸ್ ಅರ್ಪಣೆ ಮಾಡಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಕರ್ನಾಟಕ ಡಿ ಎನ್ ಎ ಸಂಶೋಧನೆ ಕೇಂದ್ರದ ನಿರ್ದೇಶಕ ಪ್ರೊ.ಪ್ರಮೋದ ಗಾಯಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಚವ್ಹಾಣ,ಡಾ.ರಾಜಶೇಖರ ದ್ಯಾಬೇರಿ, ಡಾ.ಲಕ್ಷ್ಮೀಕಾಂತ ಲೋಕರೆ,ಡಾ.ಈಶ್ವರ ಹಸಬಿ,ಡಾ.ಆಶಾ ಪಾಟೀಲ ಮತ್ತಿತರರು ಇದ್ದರು.