ಇನ್ನೂ ಭರವಸೆಯಿದೆ ಎಂದ ಹಳ್ಳಿ-ಹಕ್ಕಿ: ಯಡಿಯೂರಪ್ಪರನ್ನ ನಂಬಿದ್ದೇನೆಂದ ವಿಶ್ವನಾಥ
ಬೆಂಗಳೂರು: ಸಿಎಂ ಬಿಎಸ್ ವೈ ಜೊತೆ ಡಿಸ್ಕಸ್ ಮಾಡಿದ್ದೇನೆ. ಸಿಎಂ ರಾಜ್ಯದ ನಾಯಕರು. ನಾಲಿಗೆ ಮೇಲೆ ನಡೆಯೋ ನಾಯಕ ಯಡಿಯೂರಪ್ಪ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ನಮಗೂ ಅವಕಾಶ ಮಾಡಿಕೊಡ್ತಾರೆ. ನಮಗೆ ನಾಲಿಗೆಯ ಮೇಲೆ ನಂಬಿಕೆಯಿದೆ. ನಂಬಿಕೆನೇ ರಾಜಕಾರಣ ಎಂದು ಮಾಜಿ ಸಚಿವ ಎಚ್.ವಿಶ್ವನಾಥ ಹೇಳಿದರು.
ವಿಧಾನಪರಿಷತ್ ಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಾಕಷ್ಟು ಭಾವುಕರಾಗಿರುವ ಎಚ್.ವಿಶ್ವನಾಥ, ಸುಪ್ರೀಂ ಕೋರ್ಟ್ ತೀರ್ಪು ಎಲ್ಲೂ ಅವಕಾಶ ಕೊಡಬೇಡಿ ಅಂತ ಹೇಳಿಲ್ಲ. ನೀವು ಜನರ ಮುಂದೆ ನಿಂತು ಬನ್ನಿ ಎಂದಿದೆ. ನಾವು ಜನರ ಎದುರು ನಿಂತು ಸೋತು ಬಂದಿದ್ದೇವೆ. ಸುಪ್ರೀಂ ತೀರ್ಪು ನಮಗೆ ಅಡ್ಡ ಬರುವುದಿಲ್ಲ. ನಮಗೆ ಖಂಡಿತ ಸಿಕ್ಕೇ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.