Posts Slider

Karnataka Voice

Latest Kannada News

ಲಾಡ್ಜನಲ್ಲಿ ಕೋಚಿಮೂಲ್ ಉದ್ಯೋಗಿ ನೇಣಿಗೆ ಶರಣು

Spread the love

ಕೋಲಾರ: ಕೋಚಿಮೂಲ್ ಉದ್ಯೋಗಿ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಹೊಸ ಬಸ್ ನಿಲ್ದಾಣದ ಬಳಿಯಿರುವ ಅಂಜನಾದ್ರಿ ಲಾಡ್ಜ್ ನಲ್ಲಿ ಸಂಭವಿಸಿದೆ. ಕೋಲಾರದ ಕೋಚಿಮೂಲ್ ನಲ್ಲಿ ಪಶುವೈದ್ಯ ವಿಭಾಗದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದರ್ಶನ್(28) ಆತ್ಮಹತ್ಯೆ ಮಾಡಿಕೊಂಡಿದ್ದು, ದರ್ಶನ ಮೂಲತಃ ಚಿತ್ರದುರ್ಗ ಜಿಲ್ಲೆಯ ನಿವಾಸಿಯಾಗಿದ್ದಾರೆ. ಕೋಚಿಮೂಲ್ ನಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಪ್ರೇಮ ವೈಪಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆವ್ಯಕ್ತವಾಗಿದೆ.

ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


Spread the love

Leave a Reply

Your email address will not be published. Required fields are marked *