ಬಾಗಿಲು ಮುರಿದು ದರೋಡೆ: ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ಲೂಟಿ
ಮಂಡ್ಯ: ಸಕ್ಕರೆ ನಾಡಿನಲ್ಲಿ ಜನ ಬೆಚ್ಚಿ ಬೀಳುವಂತ ಘಟನೆ ನಾಗಮಂಗಲ ತಾಲ್ಲೂಕಿನ ಕರಿಕ್ಯಾತನಹಳ್ಳಿಯಲ್ಲಿ ತಡರಾತ್ರಿ ನೆಡೆದಿದ್ದು, ಮನೆಯ ಮುಂಬಾಗಿಲು ಮುರಿದು ಒಳನುಗ್ಗಿರುವ ದರೋಡೆಕೋರರು ಮಹಿಳೆಯನ್ನ ಕೊಲೆ ಮಾಡಿ ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಕೆ.ಆರ್.ಪೇಟೆ- ನಾಗಮಂಗಲ ಮುಖ್ಯರಸ್ತೆಯಲ್ಲಿರುವ ಗ್ರಾಮದ ಸರ್ಕಾರಿ ಶಾಲೆಯ ಎದುರಿನಲ್ಲಿರುವ ಮನೆಯಲ್ಲೆ ಘಟನೆ ನಡೆದಿದ್ದು, ಹನುಮೇಗೌಡರ ಪತ್ನಿ ಜಯಮ್ಮ (70) ಎಂಬುವರನ್ನೇ ಕೊಲೆ ಮಾಡಿದ್ದಾರೆ.
ತಡರಾತ್ರಿ ಮನೆಯ ಮುಂಬಾಗಿಲು ಮುರಿದು ನುಗ್ಗಿರುವ ದುಷ್ಕರ್ಮಿಗಳು, ಮಹಿಳೆಯ ಮೈಮೇಲಿದ್ದ ಮಾಂಗಲ್ಯ ಸರ, ಓಲೆ, ಜುಮಕಿ, ಉಂಗುರ ಹಾಗೂ ಮಾಟಿ ಸೇರಿದಂತೆ ಸುಮಾರು 75 ಗ್ರಾಂ ಗೂ ಹೆಚ್ಚು ತೂಕದ ಒಡವೆ ಕಿತ್ತು, ಕೊಲೆ ಮಾಡಿದ್ದಾರೆ. ಇಷ್ಟೇಲ್ಲ ಘಟನೆ ನಡೆದರೂ ಮನೆಯಲ್ಲಿದ್ದ ಇನ್ನುಳಿದವರಿಗೆ ಬೆಳಗಿನ ಜಾವ ಎಚ್ಚರವಾದಾಗಲೇ ಗಮನಕ್ಕೆ ಬಂದಿದೆಯಂತೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.