ಸೀರೆಯುಟ್ಟ ನೀರೇಯರೇ ಬೈಕ್ ಲ್ಲಿ ಕೂಡುವಾಗ ಹುಷಾರ್: ದುರ್ಮರಣ ನಡೆದಿದೆ

ರಾಯಚೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನದ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವಿಗೀಡಾದ ಘಟನೆ ಮುದಗಲ್ ಪಟ್ಟಣ ಸಮೀಪದ ಉಪ್ಪಾರ ನಂದಿಹಾಳ ಗ್ರಾಮದಲ್ಲಿ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಉಪ್ಪಾರ ನಂದಿಹಾಳ ಗ್ರಾಮದ ಬಸಮ್ಮ ಮಥಪಟ್ಟಿದ್ದು, ಬೈಕ್ ನಲ್ಲಿ ಹೋಗುವಾಗ ಹಿಂದಿನ ಚಕ್ರಕ್ಕೆ ಸೀರೆ ಸಿಲುಕಿ ಅವಘಡ ಸಂಭವಿಸಿದೆ.
ಪಡಿತರ ಧಾನ್ಯ ಪಡೆದು ವಾಪಾಸ್ ಬರುವಾಗ, ಸೀರೆ ಚಕ್ರಕ್ಕೆ ಸಿಲುಕಿ ನೆಲಕ್ಕೆ ಬಿದ್ದು ಸ್ಥಳದಲ್ಲೇ ಮಹಿಳೆ ಸಾವಿಗೀಡಾಗಿದ್ದು, ಸೀರೆಯುಟ್ಟವರು ಜಾಗೃತೆಯಿಂದ ಬೈಕ್ ಲ್ಲಿ ಕೂಡಬೇಕಾಗಿದೆ. ಈ ಪ್ರಕರಣ ಮುದಗಲ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.