ಆಮೆ ಕದ್ದವರು ಪೊಲೀಸರ ಪಾಲು: ಬಂಧಿತರೆಲ್ಲರೂ ಧಾರವಾಡ ತಾಲೂಕಿನವರೇ..!
ಬೆಳಗಾವಿ: ಚೆನ್ನಮ್ಮನ ಕಿತ್ತೂರ ಸಮೀಪದ ತಿಗಡೊಳ್ಳಿ ಗ್ರಾಮದ ಹತ್ತಿರ ಕಿತ್ತೂರಿನ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಮೂರು ಜನ ಆಮೆ ಬೇಟೆಗಾರನ್ನು ಬಂದಿಸಿದ್ದಾರೆ.
ಬಂಧಿತ ಆರೋಪಿಗಳು ಧಾರವಾಡ ಜಿಲ್ಲೆಯ ವೆಂಕಟಾಪೂರ ಗ್ರಾಮದ ಗಿರಿರಾಜ ಈರಪ್ಪ ಕೊಣ್ಣೂರ(48), ಯಲ್ಲಪ್ಪ ಮುದಕಪ್ಪ ಡೊಕ್ಕನ್ನವರ(29), ಸಣ್ಣಮಂಜಪ್ಪ ರಾಜಪ್ಪ ಬಾದಗಿ(52) ಆರೋಪಿಗಳು 5 ಆಮೆಗಳನ್ನು ಭೇಟೆಯಾಡಿದ್ದಾರೆ.
ಆಮೆಗಳನ್ನ ಕದ್ದು ಸಾಗಿಸುವಾಗ ಡಿ ಎಪ್ ಓ ಅಮರನಾಥ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಧಿಕಾರಿ ಸಂಜಯ ಮಗದುಮ್ ಹಾಗೂ ಸಿಬ್ಬಂದಿಗಳು ಬಂದಿಸಿ ಒಂದು ಬೈಕ್, ಬಲಿ ಹಾಗೂ ಆಯುಧವನ್ನು ವಶಕ್ಕೆ ಪಡೆಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಸಿಎಪ್ ಜಿ ಸಿ ಮಿರ್ಜಿ, ಆರ್ ಎಪ್ ಓ ಶ್ರೀನಾಥ ಕಡೋಲ್ಕರ, ಅಜಯ ಬಾಸ್ಕರಿ, ಪ್ರಕಾಶ ಕಿರಬನವರ, ಗಿರೀಶ ಮೆಕ್ಕೇದ, ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.