ದಕ್ಷ ಮಹಿಳಾ ಅಧಿಕಾರಿ ವರ್ಗಾವಣೆ: ವಿದ್ಯಾನಗರಿಯಲ್ಲಿ ಛಾಯೆ ಮೂಡಿಸಿದ್ದ ದೀಪಾ ಚೋಳನ
ಧಾರವಾಡ: ಜುಲೈ 18 ಕ್ಕೆ ಎರಡು ವರ್ಷವಾಗುತ್ತಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ ಅವರನ್ನ ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದ್ದು, ದಕ್ಷ ಮಹಿಳಾ ಅಧಿಕಾರಿಯ ವರ್ಗಾವಣೆ ಆಗಿದೆ.
ಇನ್ನೂ ಹದಿನೆಂಟು ದಿನದಲ್ಲಿ ಎರಡು ವರ್ಷ ಪೂರೈಕೆ ಮಾಡುತ್ತಿದ್ದ ದೀಪಾ ಚೋಳನ್ ವರ್ಗಾವಣೆ ಅನೇಕರಲ್ಲಿ ಬೇಸರ ಮೂಡಿಸಿದೆ. ಏಕೆಂದರೆ, ದೀಪಾ ಚೋಳನ್ ಧಾರವಾಡ ಜಿಲ್ಲೆಯಲ್ಲಿ ಕೈಗೊಂಡ ಕಾರ್ಯಗಳು. ಕಳೆದ ಎರಡು ವರ್ಷದಲ್ಲಿ ಅವರು ಮಾಡಿದ ಬಹುತೇಕ ಕಾರ್ಯಗಳು ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿಯುತ್ತವೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಲಿ, ಅಂತಾರಾಷ್ಟ್ರೀಯ ಕುಸ್ತಿಯಾಗಲಿ ಪ್ರಪಂಚವನ್ನೇ ನಡುಗಿಸಿರುವ ಕೊರೋನಾವನ್ನಾಗಲಿ ದೀಪಾ ಚೋಳನ್ ಸರಿಯಾಗಿಯೇ ನಿಭಾಯಿಸಿದ್ದರು.
ಇದೀಗ ಅವರ ವರ್ಗಾವಣೆಯನ್ನ ಸರಕಾರ ಮಾಡಿದ್ದು, ಜಿಲ್ಲೆಗೆ ಹೊಸ ಅಧಿಕಾರಿಯನ್ನ ಇನ್ನೂ ನೇಮಕ ಮಾಡಿಲ್ಲ.