ಕೊರೋನಾ ವಾರಿಯರ್ ಸತ್ತರೂ ಬಾರದ ಅಧಿಕಾರಿಗಳು: ಶವದ ಸಮೇತ ಪ್ರತಿಭಟನೆ
ಹುಬ್ಬಳ್ಳಿ: ಬೆಳಗಿನ ಜಾವ ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಪೌರ ಕಾರ್ಮಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಮಹಾನಗರ ಪಾಲಿಕೆಯ ಯಾವುದೇ ಅಧಿಕಾರಿಗಳು ಬಾರದಿರುವುದರಿಂದ ಬೇಸತ್ತು, ಶವದ ಸಮೇತ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹನಮಂತಪ್ಪ ಚಿಕ್ಕತುಂಬಳ ಎಂಬ ಪೌರ ಕಾರ್ಮಿಕನೇ ಬೆಳಿಗ್ಗೆ ಕಾರ್ಯನಿರ್ವಹಿಸುತ್ತಿದ್ದಾಗಲೇ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಈ ವಿಷಯ ತಿಳಿದ ಮೇಲೂ ಯಾವುದೇ ಅಧಿಕಾರಿಗಳು ಬಂದಿಲ್ಲ ಎಂದು ಹೋರಾಟ ನಡೆಸುತ್ತಿದ್ದವರು ದೂರಿದರು.
ಕೊರೋನಾ ವಾರಿಯರ್ ಎಂದು ಕೇವಲ ಹೇಳಿಕೆ ನೀಡಿದರೇ ಸಾಲದು. ಮೃತಪಟ್ಟ ಪೌರ ಕಾರ್ಮಿಕನಿಗೆ ಸರಕಾರ ಐವತ್ತು ಲಕ್ಷ ರೂಪಾಯಿ ಕೊಡಬೇಕೆಂದು ಆಗ್ರಹಿಸಿದರು.
ಹನಮಂತಪ್ಪನ ಶವವನ್ನ ಪಾಲಿಕೆಯ ಆವರಣದಲ್ಲಿ ತಂದು ಪ್ರತಿಭಟನೆ ನಡೆಸಲಾಯಿತು.