ವಿದ್ಯಾರ್ಥಿಗಳ ಫೀ ತುಂಬದ ಪಾಲಕರು: ಖಾಸಗಿ ಶಾಲಾ ಶಿಕ್ಷಕರ ಗೋಳು: ಸರಕಾರಕ್ಕೆ ಮನವಿ
ಹುಬ್ಬಳ್ಳಿ: ಕೊರೋನಾ ಹಿನ್ನೆಲೆಯಲ್ಲಿ ಅಶಕ್ತ ವಿದ್ಯಾರ್ಥಿಗಳ ಪಾಲಕರು ಫೀಯನ್ನ ಅವಕಾಶವಾದಾಗ ಭರಿಸಬೇಕೆಂದು ಸರಕಾರ ಹೇಳಿದ್ದರಿಂದ ಹಣವಿದ್ದವರು ಕೂಡಾ ಮಕ್ಕಳ ಫೀ ತುಂಬದಿರುವುದು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಖಾಸಗಿ ಶಾಲೆಯ ಶಿಕ್ಷಕರು ಸಂಬಳವಿಲ್ಲದೇ ಅಲೆಯುವಂತಾಗಿದ್ದು, ಸರಕಾರ ಇದಕ್ಕೊಂದು ದಾರಿ ಹುಡುಕಿ, ಕೊನೆಪಕ್ಷ ಸರಕಾರಿ ನೌಕರರಾದರೂ ಮಕ್ಕಳ ಫೀ ತುಂಬುವಂತೆ ಸರಕಾರ ಆದೇಶ ಹೊರಡಿಸಬೇಕೆಂದು ಖಾಸಗಿ ಶಾಲೆಗಳ ಒಕ್ಕೂಟ ಸಚಿವ ಜಗದೀಶ ಶೆಟ್ಟರಗೆ ಮನವಿ ಮಾಡಿಕೊಂಡರು.
ಹುಬ್ಬಳ್ಳಿಯ ಶೆಟ್ಟರ ನಿವಾಸದಲ್ಲಿ ಭೇಟಿಯಾದ ಹಲವು ಶಿಕ್ಷಕರು ತಮಗಾಗುತ್ತಿರುವ ತೊಂದರೆಯನ್ನ ವಿವರವಾಗಿ ಹೇಳಿಕೊಂಡರು. ಸರಕಾರಿ ಕೆಲಸದಲ್ಲಿದ್ದವರು ಕೂಡಾ ಮಕ್ಕಳ ಶಾಲೆಯ ಫೀಯನ್ನ ತುಂಬುತ್ತಿಲ್ಲ. ಖಾಸಗಿ ಶಾಲೆಯ ಶಿಕ್ಷಕರು ಇದರಿಂದ ಸಾಕಷ್ಟು ನೋವನ್ನಅನುಭವಿಸುತ್ತಿದ್ದಾರೆಂದು ಸಚಿವರಿಗೆ ತಿಳಿಸಿದರು. ಶಿಕ್ಷಕರ ಮನವಿಯನ್ನ ಸ್ವೀಕರಿಸಿದ ಸಚಿವ ಜಗದೀಶ ಶೆಟ್ಟರ, ಈ ವಿಷಯವನ್ನ ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ಸಮಸ್ಯೆಗೆ ಸ್ಪಂದಿಸುವ ಭರವಸೆಯನ್ನ ನೀಡಿದರು.