ಅವಳಿಗಾಗಿ ಈತ ನಡು ಮಧ್ಯಾಹ್ನವೇ ಕೊಲೆಯಾದ: ಆಕೆ ಆರಾಮಾಗಿದ್ದಾಳಂತೆ

ಚಾಮರಾಜನಗರ: ಪ್ರೇಯಸಿಗಾಗಿ ಇಬ್ಬರು ವ್ಯಕ್ತಿಗಳ ನಡುವೆ ಘರ್ಷಣೆಯಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ರಾಜು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಅಕ್ಕಪಕ್ಕದ ಜಮೀನಿನ ಇಬ್ಬರು ವ್ಯಕ್ತಿಗಳ ನಡುವೆ ಅನೈತಿಕ ಸಂಬಂಧದ ವಿಚಾರವಾಗಿ ಘರ್ಷಣೆ ನಡೆದಿತ್ತು. ಮಹಿಳೆಯೊರ್ವಳ ಜೊತೆ ಅಕ್ರಮ ಸಂಬಂಧ ವಿಚಾರ, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಚ್ಚಿನಿಂದ ರಾಜು, ಮಹೇಶನಿಗೆ ಹೊಡೆದ ಪರಿಣಾಮ ಕೊಲೆಯಾಗಿದೆ. ಘಟನೆ ನಂತರ ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಶರಣಾಗಿದ್ದಾನೆ. ಸ್ಥಳಕ್ಕೆ ಗುಂಡ್ಲುಪೇಟೆ ಸಿಪಿಐ ಮಹದೇವಸ್ವಾಮಿ ಭೇಟಿ ನೀಡಿದ್ದರು.