ಮೋದಿ ಜೀವ ಭಯದಿಂದ ಹೊರಗೆ ಬಂದಿಲ್ಲ: ಸಿದ್ಧರಾಮಯ್ಯ ವ್ಯಂಗ್ಯ
ಬೆಂಗಳೂರು: ಇದೊಂದು ವಿನೂತನ ಕಾರ್ಯಕ್ರಮ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಕಾರ್ಯಕ್ರಮ ಮಾಡಿದ್ದಾರೆ. ಸುಮಾರು 20 ಲಕ್ಷ ಜನರು ಈ ಕಾರ್ಯಕ್ರಮ ನೋಡುತಿದ್ದಾರೆ. ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿ 4 ತಿಂಗಳಾಯ್ತು. ಕೊರೋನಾ ವೈರಸ್ ಇರುವುದರಿಂದ ಅದ್ಧೂರಿ ಸಮಾರಂಭ ಮಾಡ್ಲಿಕೆ ಆಗಿಲ್ಲ. ಡಿಕೆಶಿ ನನ್ನ ಮಂತ್ರಿ ಮಂಡಲದಲ್ಲಿ ಕೆಲಸ ಮಾಡಿದವರು. ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಣ್ಣಿಸಿದರು.
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಗಾಂಧಿ ಕೊಂದವರನ್ನ ವೈಭವಿಕರಿಸ್ತಾರೆ. ಒನ್ ಆಫ್ ದ್ ಆರೋಪಿಯ ಹೆಸರನ್ಮ ಬೆಂಗಳೂರಿನ ರಸ್ತೆಗೆ ಹೆಸರಿಟ್ಟಿದ್ದಾರೆ. ಬಿಜೆಪಿಯವರಿಗೆ ತ್ಯಾಗ ಬಲಿದಾನದ ಅರ್ಥವೇ ಗೊತ್ತಿಲ್ಲ. ಕೊರೋನಾ ಬಂದಾಗಿನಿಂದ ಮೋದಿ ಮನೆಯಿಂದ ಹೊರ ಬಂದಿಲ್ಲ. ಆ ಆಸಾಮಿ ಜೀವ ಭಯದಿಂದ ಮನೆ ಬಿಟ್ಟೇ ಬರ್ತಿಲ್ಲ. ಇಂತಹ ಜೀವ ಭಯ ಇರೋ ವ್ಯಕ್ತಿಯಿಂದ ಎಂತಹ ತ್ಯಾಗ ಬಲಿದಾನ ನಿರೀಕ್ಷಿಸೋಕೆ ಸಾಧ್ಯವೆಂದು ಲೇವಡಿ ಮಾಡಿದರು.
ಡಿಕೆಶಿವಕುಮಾರ್ ಮುಂದಿನ ವರ್ಷವೇ ಚುನಾವಣೆ ಬರುತ್ತೆ ಅಂತಾ ಉತ್ಸಾಹದಿಂದ ಹೇಳ್ತಾರೆ. ಆದ್ರೆ ಕಳ್ಳರು ಅಷ್ಟು ಸುಲಭವಾಗಿ ಬಿಟ್ಟು ಕೊಡ್ತಾರಾ. ನಮಗೆ ಇನ್ನೂ ಸಮಯ ಇದೆ, ಬೂತ್ ಮಟ್ಟದಿಂದ ಕೇಡರ್ ಪಾರ್ಟಿ ಮಾಡೋಕೆ ಹೊರಟ್ಡಿದ್ದೀರಾ. ಈಗ ನಿಮ್ಮ ಪ್ಲಾನ್ ಚೆನ್ನಾಗಿದೆ, ನಿಮ್ಮ ಜೊತೆ ನಾವೆಲ್ಲಾ ಇರ್ತೀವಿ ಎಂದರು.
ಒಬ್ಬರು ಡಿಪ್ಯಾಕ್ಟೋ ಸಿಎಂ ಇದ್ದಾರೆ. ಇಂತವರಿಂದ ಬಿಜೆಪಿಯವರೇ ಬೇಸತ್ತಿದ್ದಾರೆ. ಅವರ ವೈಫಲ್ಯಗಳು ನಮಗೆ ಅನುಕೂಲ ಆಗುತ್ತೆ. ಅದರ ಜೊತೆಗೆ ಪಕ್ಷ ಸಂಘಟನೆ ಚೆನ್ನಾಗಿದ್ರೇ ಕಾಂಗ್ರೆಸ್ ನಾ ತಡೆಯೋರು ಯಾರು ಇರಲ್ಲ. ಕೊರೋನಾ ಮುಗಿದ್ಮೇಲೆ ರಾಜ್ಯದ ಮೂಲೆ ಮೂಲೆಗೆ ಹೋಗೋಣ ಎಂದು ಹೇಳಿದರು.
ಕೊರೋನಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಮಾಡಿದ ಕೆಲಸವನ್ನ ಆಡಳಿತ ಪಕ್ಷದವರು ಮಾಡಿಲ್ಲ. ಬಿಜೆಪಿಯವರು ಬಡವರಿಗೆ ಕೊಡಬೇಕಿದ್ದ ಅಕ್ಕಿಯನ್ನೆ ಲೂಟಿ ಮಾಡಿದ್ರು ಎಂದು ದೂರಿದರು.
ನಿಮಗೆಲ್ಲರಿಗೂ ಉತ್ಸಾಹ, ವಯಸ್ಸಿದೆ. ಡಿಕೆಶಿಗೆ ಯುವ ನಾಯಕ, ಯುವ ನಾಯಕ ಅಂತಾರೆ. ಆ ಚೈತನ್ಯ ಮತ್ತಷ್ಟು ಶಕ್ತಿ ನೀಡಲಿ. ನಾವೆಲ್ಲಾ ನಿಮ್ ಜೊತೆ ಇರ್ತೇವೆ ಎಂದು ಡಿಕೆಶಿಗೆ ಶುಭ ಕೋರಿದರು.