ಧಾರವಾಡದಲ್ಲಿ ಹಾರಿದ ಗುಂಡು: ಕೊಲೆ ಮಾಡಲು ಬಂದವನೇ ಕೊಲೆಯಾದ :KARNATAKA VOICE EXCLUSIVE
ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನ ಬೆದರಿಸಲು ಬಂದಿದ್ದ ರೌಡಿಷೀಟರ್‌ಗೆ ಗುಂಡು ಹೊಡೆದು ಕೊಲೆ ಮಾಡಿರುವ ಪ್ರಕರಣ ಧಾರವಾಡದ ಮದಿಹಾಳದಲ್ಲಿ ಸಂಭವಿಸಿದೆ.
ಮದಿಹಾಳ ನಿವಾಸಿ ಶ್ರೀಶೈಲ ಶಿರೂರ ಎಂಬಾತನಿಗೆ ಬೆದರಿಸಲು ಆತನ ಮನೆಗೆ ಬಂದಿದ್ದ ರೌಡಿಷೀಟರ್ ಶಿವಯೋಗಿ ಬಾವಿಕಟ್ಟಿಗೆ ಗುಂಡು ಬಿದ್ದು ಸಾವಿಗೀಡಾಗಿದ್ದು, ಇನ್ನಿಬ್ಬರಿಗೆ ಗಾಯವಾಗಿದೆ.
ಮದಿಹಾಳದ ಮನೆಗೆ ಬಂದು ಬೆದರಿಸಿ ಕೊಲೆ ಮಾಡಲು ಮುಂದಾದಾಗ ಶ್ರೀಶೈಲ, ಗುಂಡು ಹಾರಿಸಿದ್ದಾನೆ. ಆಗ ಸ್ಥಳದಲ್ಲಿ ಶಿವಯೋಗಿ ಸಾವನ್ನಪ್ಪಿದ್ದಾನೆ.
ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.