ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಜಂಟಿ ನಗರ ಪ್ರದಕ್ಷಿಣೆ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳು ಸೀಜ್
ಹುಬ್ಬಳ್ಳಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಜಂಟಿಯಾಗಿ ಹುಬ್ಬಳ್ಳಿ ನಗರದಲ್ಲಿ ಗಸ್ತು ಸಂಚಾರ ಮಾಡಿ ಲಾಕ್ ಡೌನ್, ಕರ್ಪ್ಯೂ ಪರಿಣಾಮಕಾರಿಯಾಗಿ ಜಾರಿ ಬಗ್ಗೆ ಪರಿಶೀಲನೆ ನಡೆಸಿದರು.
ನವನಗರ, ವಿದ್ಯಾನಗರ, ಹೊಸೂರು ವೃತ್ತ, ಚನ್ನಮ್ಮ ಸರ್ಕಲ್, ಕೆ.ಸಿ. ಸರ್ಕಲ್, ಕೇಶ್ವಾಪುರ, ಶಬರಿನಗರ, ಕುಸುಗಲ್ ರಸ್ತೆ, ರಮೇಶ್ ಭವನ ಸರ್ಕಲ್, ಸ್ಟೇಷನ್ ರೋಡ್, ದುರ್ಗದ ಬೈಲ್, ಡಾಕಪ್ಪನ ಸರ್ಕಲ್, ಹಳೇ ಹುಬ್ಬಳ್ಳಿ , ಇಂಡಿ ಪಂಪ್, ಗೋಕಲ ರಸ್ತೆಯಲ್ಲಿ ಸಂಚರಿಸಿ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರಿಗೆ ತಿಳುವಳಿಕೆಯೊಂದಿಗೆ ಎಚ್ಚರಿಕೆ ನೀಡಿದರು. ಪರಿಶೀಲನೆ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಮತ್ತು ಕಾರ್ ಗಳನ್ನು ಪೊಲೀಸ್ ಆಯುಕ್ತರ ಸೂಚನೆ ಮೆರೆಗೆ ವಶಕ್ಕೆ ಪಡೆದು ಕರ್ಪ್ಯೂ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಿಲಾಯಿತು.