ಮಾರಡಗಿ ಗ್ರಾಮಕ್ಕೂ ಹೋಗುವಂಗಿಲ್ಲ: ಊರಿಗೋಗೋ ಮುನ್ನವೇ ಬಿತ್ತು ಬೇಲಿ
ಧಾರವಾಡ: ತಾಲೂಕಿನ ಮಾರಡಗಿ ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆಗೆ ಮುಳ್ಳಿನ ಬೇಲಿ ಹಾಕಲಾಗಿದ್ದು, ಪರವೂರಿನವರು ಊರಿಗೆ ಬರದಿರುವ ಹಾಗೇ ಕ್ರಮ ಜರುಗಿಸಲಾಗಿದೆ.
ಹೆಬ್ಬಳ್ಳಿ ಗ್ರಾಮದಿಂದ ಮಾರಡಗಿ ಮೂಲಕ ಧಾರವಾಡಕ್ಕೆ ಹೋಗಬೇಕಾದ ಮಾರಡಗಿ ಕ್ರಾಸ್ ಗೆ ಮುಳ್ಳಿನ ಬೇಲಿ ಹಾಕುವ ಮೂಲಕ ಹೆಚ್ಚುತ್ತಿರುವ ಕೊರೋನಾ ವೈರಸ್ ತಪ್ಪಿಸುವ ಪ್ರಯತ್ನಕ್ಕೆ ಗ್ರಾಮಸ್ಥರು ಮುಂದಾಗಿದ್ದರು.
ಈಗಾಗಲೇ ಸೋಮಾಪುರ ಗ್ರಾಮಕ್ಕೂ ಕೊರೋನಾ ಪಾಸಿಟಿವ್ ಎಂಟ್ರಿ ಕೊಟ್ಟಿದ್ದು, ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಇದೇ ಕಾರಣದಿಂದ ಪ್ರಮುಖ ರಸ್ತೆಗೆ ಬೇಲಿ ಹಾಕಿದ್ದಾರೆ.