ಕೊರೋನಾ ಸಮರದಲ್ಲೂ ನಿಲ್ಲದ ಅಭಿವೃದ್ಧಿ: ಮಾದರಿ ಶಾಸಕ ಮಾಡುತ್ತಿರುವುದೇನು..?
ಧಾರವಾಡ: ಇಡೀ ದೇಶದಲ್ಲಿ ಹೇಗೆ ಕೊರೋನಾ ವೈರಸ್ ಹೆಚ್ಚಾಗುತ್ತಿದೇಯೋ ಹಾಗೇಯೇ ಜಿಲ್ಲೆಯಲ್ಲೂ ಪ್ರತಿದಿನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ, ಆದರೆ, ನವಲಗುಂದ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಪರ್ವ ನಿರಂತರವಾಗಿ ನಡೆಯುತ್ತಲೇ ಇದೆ. ಹೀಗಾಗಿ ಕ್ಷೇತ್ರದ ಜನರು ನೆಮ್ಮದಿಯಾಗಿದ್ದಾರೆ.
ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಇಂದು ಒಂದೇ ದಿನ ತಲೆಮೊರಬ, ಗೊಬ್ಬರಗುಂಪಿ, ಹೆಬ್ಬಾಳ, ಹಾಳಕುಸುಗಲ್ಲ, ಅಮರಗೋಳ, ಬೆಳವಟಗಿ ಹಾಗೂ ಹನಸಿಯಲ್ಲಿ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.
ಎಲೆಮರೆ ಕಾಯಿಯಂತೆ ಕ್ಷೇತ್ರದಲ್ಲಿರುವ ಕೊರೋನಾ ಪಾಸಿಟಿವ್ ಪ್ರಕರಣಗಳು ಕಡಿಮೆ ಮಾಡಲು ನಿರಂತರವಾಗಿ ಅಧಿಕಾರಿಗಳಿಗೆ ಸೂಚನೆ-ಆದೇಶ ಕೊಡುತ್ತಲೇ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಗ್ರಾಮೀಣಅಭಿವೃದ್ಧಿಯ ಕನಸು ಕಂಡಿರುವ ಶಾಸಕ ಜನಪರ ಕಾಳಜಿಯನ್ನ ಕಾರ್ಯ ನಿರ್ವಹಿಸುವ ಮೂಲಕ ಯಾವುದೇ ಪ್ರಚಾರ ಬಯಸದೇ ಮಾಡುತ್ತಿರುವುದು ಮಾತ್ರ ಸೋಜಿಗವೇ ಸರಿ.