ಸೋಮಾಪುರದಲ್ಲಿ ಮತ್ತಿಬ್ಬರಿಗೆ ಸೋಂಕು: 882ಕ್ಕೇರಿದ ಧಾರವಾಡ ಜಿಲ್ಲೆಯ ಪಾಸಿಟಿವ್ ಕೇಸ್
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 882ಕ್ಕೆ ಏರಿಕೆ
- ಕೊರೋನಾ ಸೋಂಕಿನಿಂದ 40ವರ್ಷ ಹಾಗೂ 60ವರ್ಷ ಇಬ್ಬರು ಪುರುಷರು ಶುಕ್ರವಾರ ಮೃತಪಟ್ಟಿದ್ದಾರೆ.
- ಆ ಮೂಲಕ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
- 13 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಧಾರವಾಡ: ಜಿಲ್ಲೆಯಲ್ಲಿಂದು ಮತ್ತೆ ಐವತ್ತು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರಲ್ಲಿ ಶೀತ, ಕೆಮ್ಮು, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 19 ಜನರಲ್ಲಿ ಸೋಂಕು ದೃಢಪಟ್ಟಿದೆ. 30 ಜನರ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ಅಂತರರಾಷ್ಟ್ರೀಯ ಪ್ರವಾಸ ಹಿನ್ನೆಲೆಯ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ 12 ಮಂದಿ ಧಾರವಾಡದವರು, ತಾಲ್ಲೂಕಿನ ಸೋಮಾಪುರದ ಇಬ್ಬರು ಹಾಗೂ ಹುಬ್ಬಳ್ಳಿಯ 36 ಮಂದಿ ಒಳಗೊಂಡಿದ್ದಾರೆ.
ಸೋಂಕಿತರದಲ್ಲಿ ಧಾರವಾಡ ಜಿಲ್ಲಾ ನ್ಯಾಯಾಲಯ ಮುಂಭಾಗದ ಪ್ರದೇಶ (69, ಮಹಿಳೆ), ಮಣಿಕಿಲ್ಲಾ (51, ಮಹಿಳೆ), ಸಂಚಾರ ಠಾಣೆ (35, ಮಹಿಳೆ), ಸಪ್ತಾಪುರ (59, ಪುರುಷ), ಆಕಾಶವಾಣಿ ಬಳಿ (60, ಪುರುಷ ಹಾಗೂ 56 ಪುರುಷ), ಕೆಸಿಡಿ ಬಳಿ (25, ಪುರುಷ), ವಿನಾಯಕ ನಗರ (62, ಪುರುಷ), ತೇಲಗಾರ ಓಣಿ, ಮುರುಘಾಮಠ (39, ಪುರುಷ), ಜಮಾದಾರ ಓಣಿ, ಲೈನ್‌ಬಜಾರ್ (39, ಪುರುಷ), ರಘೋತ್ತಮ ಅಪಾರ್ಟ್‌ಮೆಂಟ್, ಮಹಿಷಿ ರಸ್ತೆ (16, ಬಾಲಕ), ಬನಶ್ರೀ ನಗರ (58, ಪುರುಷ) ಇವರಲ್ಲಿ ಸೋಂಕು ದೃಢಪಟ್ಟಿದೆ.