ಸಂಡೇ ಲಾಕ್‌ಡೌನ್ ಚೋಟಾ ಮುಂಬೈ ಹೆಂಗಿದೆ ಗೊತ್ತಾ…? ಚೆನ್ನಮ್ಮ ಸರ್ಕಲ್‌ನಲ್ಲಿ ಏನಾಗಿದೆ ನೋಡಿ
ಸಂಡೇ ಲಾಕ್‌ಡೌನ್ ಚೋಟಾ ಮುಂಬೈ ಹೆಂಗಿದೆ ಗೊತ್ತಾ…? ಚೆನ್ನಮ್ಮ ಸರ್ಕಲ್‌ನಲ್ಲಿ ಏನಾಗಿದೆ ನೋಡ
ಹುಬ್ಬಳ್ಳಿ: ರಾಜ್ಯ ಸರಕಾರದ ಆದೇಶದಂತೆ ಸಂಡೇ ಲಾಕ್‌ಡೌನ್ ಮುಂದಯವರೆದಿದ್ದು ಚೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಜನಸಂಚಾರವೇ ಕಡಿಮೆಯಾಗಿದೆ. ಜನರು ಸಂಪೂರ್ಣವಾಗಿ ಸರಕಾರದ ಆದೇಶವನ್ನ ಪಾಲಿಸುತ್ತಿದ್ದಾರೆ.
ಸದಾ ಜನರಿಂದಲೇ ಗಿಜಿಗುಡುವ ಪ್ರಸಿದ್ಧ ಚೆನ್ನಮ್ಮ ಸರ್ಕಲ್‌ನಲ್ಲಿ ಒಬ್ಬೇ ಒಬ್ಬ ಮಹಿಳೆಯ ಹೋಗಿದ್ದನ್ನ ಬಿಟ್ಟರೇ ಬಹುತೇಕರು ಹೊರಗೆ ಬಂದೇಯಿಲ್ಲ.
ಲಾಕ್‌ಡೌನ್ ವೇಳೆಯಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರ ಪಹರೆಯನ್ನ ಹೆಚ್ಚಿಸಲಾಗುತ್ತಿತ್ತು. ಆದರೆ, ನಗರದಲ್ಲಿ ಜನರೇ ಎಚ್ಚೆತ್ತುಕೊಂಡಿರುವುದರಿಂದ ಪೊಲೀಸ್ ಕಾವಲು ಕಡಿಮೆಯಿದೆ.
ಸಂಡೇ ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಸಾರಿಗೆ ಇಲಾಖೆಯ ಬಸ್‌ಗಳನ್ನ ಬಂದ್ ಮಾಡಲಾಗಿದ್ದು, ಬಸ್ ನಿಲ್ದಾಣ ಕೂಡಾ ಬಿಕೋ ಎನ್ನುತ್ತಿದೆ.
ಕೊರೋನಾ ಪಾಸಿಟಿವ್ ಪ್ರಕರಣಗಳು ಹುಬ್ಬಳ್ಳಿಯ ಗಲ್ಲಿಗಲ್ಲಿಯೂ ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ ಕಂಡು ಬಂದ ಒಟ್ಟು ಪ್ರಕರಣಗಳಲ್ಲಿ ಸಿಂಹಪಾಲು ಇಲ್ಲಿಯದ್ದೇ ಆಗಿದೆ. ಹೀಗಾಗಿ ಜನ ಭಯಭೀತರಾಗುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮವನ್ನ ತೆಗೆದುಕೊಂಡು ಮುನ್ನಡೆಯುತ್ತಿದೆ.