ಮಗಳ ಪ್ರೀತಿಗೆ ತವರು ಮನೆಯ ಕೊಡಿಲಿಯೇಟು: ಮಗಳ ಮಾವನೂ ಸಾವು
ಮಗಳ ಪ್ರೀತಿಗೆ ತವರು ಮನೆಯ ಕೊಡಿಲಿಯೇಟು: ಮಗಳ ಮಾವನೂ ಸಾವು
ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹುಡುಗಿಯ ಮಾವನೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಪ್ರಕರಣದಲ್ಲಿ ಐವರು ಸಾವನ್ನಪ್ಪಿದಂತಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನ ತಂದೆ ಈರಪ್ಪ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಕೊಲೆಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮೌನೇಶನ ತಂದೆ, ತಾಯಿ, ಇಬ್ಬರು ಅಣ್ಣಂದಿರು ಹಾಗೂ ಅತ್ತಿಗೆ ಕೊಲೆಯಾದಂತಾಗಿದೆ. ಇನ್ನಿಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಮಂಜುಳಾನ ಪ್ರೀತಿಸಿ ಮದುವೆಯಾಗಿದ್ದ ಮೌನೇಶ ಸುಕಾಲಪೇಟೆಯಲ್ಲೇ ಜೀವನ ಸಾಗಿಸುತ್ತಿದ್ದ. ಮಂಜುಳಾಳ ತಂದೆ ಬೇರೆಯೊಬ್ಬಳೊಂದಿಗೆ ಮದುವೆಯಾಗಿದ್ದರಿಂದ ಮಂಜುಳಾನ ತಾಯಿಗೆ ಕಿರುಕುಳ ನೀಡಲಾಗುತ್ತಿತ್ತು. ಇದನ್ನ ಕೇಳಲು ತವರೂರಿಗೆ ಮಂಜುಳಾ ಹೋಗಿದ್ದನ್ನೇ ನೆಪ ಮಾಡಿಕೊಂಡು ಬಂದ ಕಿರಾತಕರು, ತನ್ನ ಮಗಳ ಕುಡುಂಬಬನ್ನೇ ನಾಶ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಘಟನೆಯಿಂದ ಗಾಬರಿಯಾದ ಮೌನೇಶ ಮತ್ತು ಮಂಜುಳಾ ಪರಾರಿಯಾಗಿದ್ದಾರೆ.