Karnataka Voice

Latest Kannada News

ಐದು ಜನರನ್ನ ಕೊಚ್ಚಿ ಕೊಂದವರು ಹೇಗಿದ್ದಾರೆ ಗೊತ್ತಾ…! ತಲ್ವಾರ ಕೊಟ್ಟಿದ್ದೇ ಮಹಿಳೆಯಂತೆ… !

Spread the love

ಐದು ಜನರನ್ನ ಕೊಚ್ಚಿ ಕೊಂದವರು ಹೇಗಿದ್ದಾರೆ ಗೊತ್ತಾ…! ತಲ್ವಾರ ಕೊಟ್ಟಿದ್ದೇ ಮಹಿಳೆಯಂತೆ…

ರಾಯಚೂರು: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಐಜಿ ನಂಜುಂಡಸ್ವಾಮಿ ಭೇಟಿ ನೀಡಿ ಮಾಹಿತಿ ಕೂಡಾ ಸಂಗ್ರಹಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮ ಮಾಹಿತಿಯನ್ನ ಬಿಡುಗಡೆ ಮಾಡಿದ್ದು, ಅದು ಈ ಕೆಳಗಿನಂತಿದೆ….

ದಿನಾಂಕ 11.07.2020 ರಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದು ಈ ಜಗಳದಲ್ಲಿ ಐದು ಜನರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದವರ ವಿವರ 1) ನಾಗರಾಜ ತಂದೆ ಈರಪ್ಪ ವ- 38
2) ಸುಮಿತ್ರಾ ಗಂಡ ಈರಪ್ಪ ವ- 55
3) ಶ್ರೀದೇವಿ ಗಂಡ ಯಲ್ಲಪ್ಪ ವ- 30
4) ಹನುಮೇಶ ತಂದೆ ಈರಪ್ಪ ವ- 35
5) ಈರಪ್ಪ ತಂದೆ ಜಕ್ಕಪ್ಪ ವ- 60 ಇವರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಇಬ್ಬರು
1) ತಾಯಮ್ಮ ಗಂಡ ಶರಣಪ್ಪ ವ-23
2) ರೇವತಿ ಗಂಡ ಶರಣಪ್ಪ ವ-25
ಇವರಿಗೆ ಗಾಯಗಳಾಗಿದ್ದು ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐದು ಜನರನ್ನು ವಶಕ್ಕೆ ಪಡೆಯಲಾಗಿದೆ.


1)ಸಣ್ಣ ಪಕ್ಕೀರಪ್ಪ ತಂದೆ ಸೋಮಣ್ಣ ವ-45
2)ಅಮ್ಮಣ್ಣ ತಂದೆ ಸೋಮಣ್ಣ ವ-58
3)ಸೋಮಶೇಖರ್ ತಂದೆ ಪಕ್ಕೀರಪ್ಪ ವ-21
4)ರೇಖಾ ಗಂಡ ಸಣ್ಣ ಪಕ್ಕೀರಪ್ಪ ವ-25
5)ಗಂಗಮ್ಮ ಗಂಡ ಅಂಬಣ್ಣ ವ-55 ಇವರನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಮಾಡಿದ ಸಿಂಧನೂರು ನಗರದ DYSP, CPI, PSI ರವರನ್ನು ಶ್ಲಾಘಿಸಲಾಗಿದೆ.

ಎಸ್ಪಿ ರಾಯಚೂರು.


Spread the love

Leave a Reply

Your email address will not be published. Required fields are marked *