Posts Slider

Karnataka Voice

Latest Kannada News

ಕಳ್ಳನೊಂದಿಗಿದ್ದು ಕೊರೋನಾ ಪಾಸಿಟಿವ್ ಆಗಿದ್ದ ಪೊಲೀಸ್ ಆಸ್ಪತ್ರೆಯಿಂದ ಬಿಡುಗಡೆ: ಹೂದಳ ಸುರಿಸಿದ ಸಿಬ್ಬಂದಿ- Exclusive Video

1 min read
Spread the love

ಕಳ್ಳನೊಂದಿಗಿದ್ದು ಕೊರೋನಾ ಪಾಸಿಟಿವ್ ಆಗಿದ್ದ ಪೊಲೀಸ್ ಆಸ್ಪತ್ರೆಯಿಂದ ಬಿಡುಗಡೆ: ಹೂದಳ ಸುರಿಸಿದ ಸಿಬ್ಬಂದಿ- Exclusive Video

ಹುಬ್ಬಳ್ಳಿ: ಚಾಣಾಕ್ಷತನದಿಂದ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು ಕೂಡಾ ಕಳ್ಳನಿಂದ ಕೊರೋನಾ ಪಾಸಿಟಿವ್‌ಗೆ ಒಳಬೇಕಾಗಿತ್ತು. ಹೀಗೆ ಪಾಸಿಟಿವ್ ಬಂದು ಆಸ್ಪತ್ರೆ ಸೇರಿದ್ದ ಪೊಲೀಸ್ ಕಾನ್ಸ್‌ಟೇಬಲ್ ಕಿಮ್ಸ್‌ನಿಂದ ಬಿಡುಗಡೆಯಾದರು.
ಕೋರೋನಾ ಸೋಂಕಿನಿಂದ ಗುಣಮುಖವಾದ ಉಪನಗರ ಸಿಬ್ಬಂದಿಗೆ ಆಸ್ಪತ್ರೆಯಿಂದ ಹೊರಗೆ ಬರುತ್ತಿದಂತೆ ಸನ್ಮಾನ ಮಾಡಲಾಯಿತು. ತಮ್ಮ ಇಲಾಖೆಯ ಸಿಬ್ಬಂದಿಯನ್ನು ಆಸ್ಪತ್ರೆಯಿಂದ ಸ್ವಾಗತಿಸಲು ಬಂದ ಪೊಲೀಸ್ ಅಧಿಕಾರಿಗಳು ಬಿಡುಗಡೆಯಾದವರ ಮೇಲೆ ಹೂದಳ ಹಾಕಿ ಆದರಿಸಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆತ್ಮೀಯವಾಗಿ ಅಧಿಕಾರಿಗಳು ಗುಣಮುಖವಾದ ಪೊಲೀಸ್ ಪೇದೆಗೆ ಮೈಸೂರು ಪೇಟ್, ಶಾಲು, ಹೂವಿನ ಮಾಲೆ ಹಾಕಿ ಗೌರವಿಸಿದರು.
ಇಡೀ ದೃಶ್ಯ ಪೊಲೀಸರಲ್ಲಿರುವ ಆತ್ಮೀಯತೆಯನ್ನ ತೋರಿಸುತ್ತಿತ್ತು. ತಮ್ಮ ಮನೆಯ ಹುಡುಗ ಹೊರ ಬಂದಂತೆ ಸ್ವಾಗತಿಸಿದ್ದು, ಎಲ್ಲರಲ್ಲೂ ಮತ್ತಷ್ಟು ಗೌರವ ಹೆಚ್ಚುವಂತೆ ಮಾಡಿತು.


Spread the love

Leave a Reply

Your email address will not be published. Required fields are marked *