Posts Slider

Karnataka Voice

Latest Kannada News

ಕೋವಿಡ್ ಸೋಂಕಿತರಿಗೆ ಮತ್ತಷ್ಟು ಟೆನ್ಸ್ ಫ್ರೀ ಮಾಡಿದ ಧಾರವಾಡ ಜಿಲ್ಲಾಡಳಿತ

Spread the love

ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರ ಅಂಬುಲೆನ್ಸ್ ನಿರ್ವಹಣೆ ಹಾಗೂ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆ ಹಾಗೂ ಕೋವಿಡ್ ಕೇರ್ ಸೆಂಟರುಗಳ ನಿರ್ವಹಣೆಗೆ ತಂಡಗಳ ರಚನೆ


ಧಾರವಾಡ: ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕಾಗಿ ಅಂಬುಲೆನ್ಸ್ ಗಳ ನಿರ್ವಹಣೆ ಹಾಗೂ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಗಳ ನಿರ್ವಹಣೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಅಂಬುಲೆನ್ಸ್ ನಿರ್ವಹಣೆ ತಂಡ
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕೋವಿಡ್ ಸೋಂಕಿತರನ್ನು ಸ್ಥಳಾಂತರಿಸಲು
ಭೂ ದಾಖಲೆಗಳ ಉಪನಿರ್ದೇಶಕಿ ನಜ್ಮಾ ಪೀರಜಾದೆ – 9341015656,
ಮಹಾನಗರಪಾಲಿಕೆ ಉಪ ಆಯುಕ್ತ ಶಂಕರಾನಂದ ಬನಶಂಕರಿ – 9242014944
ಅವರನ್ನು ಸಂಪರ್ಕಿಸಬಹುದು.
ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಅಲ್ಲಿನ ತಹಸೀಲ್ದಾರ ಅವರನ್ನು ಸಂಪರ್ಕಿಸಬಹುದು.

ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಕುರಿತ ಮಾಹಿತಿ ನಿರ್ವಹಣೆ
ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರಾದ ಇಬ್ರಾಹಿಂ ಮೈಗೂರ – 9986716666,
ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಷಣ್ಮುಖ-8105077333, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ-8277332970 ಅವರನ್ನು ಸಂಪರ್ಕಿಸಬಹುದು.

ಲಕ್ಷಣ ರಹಿತ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸುವ ಮಾಹಿತಿ
ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್- 9448821093,
ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್ .ಆರ್.ಪುರುಷೋತ್ತಮ- 9844844989,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ – 9901418289,
ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಮ್ 1077( 0836), 0836-2445666, ವಾಟ್ಸಪ್ ಸಂಖ್ಯೆಗಳಾದ -9449847646 ಅಥವಾ 9449847641 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *