ರಾಜ್ಯದಲ್ಲಿಂದು ದಾಖಲೆ ಪಾಸಿಟಿವ್ ಪ್ರಕರಣ ಪತ್ತೆ: ಬೆಂಗಳೂರಲ್ಲಿ 60 ಜನರ ಸಾವು
1 min readಬೆಂಗಳೂರು: ಇಡೀ ರಾಜ್ಯದಲ್ಲಿಂದು 3176 ಕೊರೋನಾ ಪಾಸಿಟಿವ್ ಪ್ರಕರಣಗಳು ಅಧಿಕವಾಗಿ ದಾಖಲಾಗಿದ್ದು, ಬೆಂಗಳೂರವೊಂದರಲ್ಲಿ ಅತೀ ಹೆಚ್ವು 1975 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು 60ಜನ ಸಾವಿಗೀಡಾಗಿದ್ದಾರೆ.
ರಾಜ್ಯ ರಾಜಧಾನಿಯನ್ನ ಈಗಾಗಲೇ ಲಾಕ್‌ಡೌನ್ ಮಾಡಿದ್ದು ಪ್ರಕರಣಗಳು ಕಡಿಮೆಯಾಗುತ್ತಿಲ್ಲ.
*ಬೀದರ ಮಾಹಿತಿ*
ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಒಂದೇ ದಿನದಲ್ಲಿ 36 ಕೋರೋನಾ ಕೇಸ್ ಪತ್ತೆ….
ಇಲ್ಲಿಯವರೆ ಜಿಲ್ಲೆಯ ಒಟ್ಟು 1139 ಕೋರೋನಾ ಕೇಸ್
ಇಂದು ಆಸ್ಪತ್ರೆ ಯಿಂದ ಬಿಡುಗಡೆ ಯಾದವರು 58 ಜನರು
ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 670
ಜಿಲ್ಲೆಯಲ್ಲಿ ಒಟ್ಟು ಆಕ್ಟಿವ್ ಕೇಸ್ ಗಳ ಸಂಖ್ಯೆ 416
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ದಿಂದ ಸಾವನ್ನಪ್ಪಿದವರ ಸಂಖ್ಯೆ 53ರಾಗಿದೆ.
ಜಿಲ್ಲೆಯಲ್ಲಿ ಒಟ್ಟು 298 ಕಂಟೋನ್ಮೆಂಟ್ ಜೋನ್ ಗಳ ಸ್ಥಾಪನೆ ಮಾಡಲಾಗಿದೆ.
*ಹಾವೇರಿ ಮಾಹಿತಿ*
ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ
ಇಂದು ಜಿಲ್ಲೆಯಲ್ಲಿ 14 ಪಾಜಿಟಿವ್ ಕೇಸ್ ಪತ್ತೆ.
ಹಾವೇರಿ 2, ರಾಣೆಬೆನ್ನೂರ 3, ಹಾನಗಲ್ 1, ಬ್ಯಾಡಗಿ 2, ಹಿರೆಕೇರೂರ 4, ಸವಣೂರು 2 ಕೊರೊನ ಪಾಜಿಟಿವ್ ಕೇಸ್ ಪತ್ತೆ
ಬಹುತೇಕ ಕಂಟೋನ್ಮೆಂಟ್ ಜೂನ್ ನಿಂದ ಬಂದ ಪಾಸಿಟಿವ್ ಕೇಸ್
ಜಿಲ್ಲೆಯಲ್ಲಿ 322 ಕ್ಕೇರಿದ ಕೊರೋನ ಪಾಸಿಟಿವ್ ಕೇಸ್
211 ಕೇಸ್‌ಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ಇಂದಿನ ಪಾಜಿಟಿವ್ ಪ್ರಕರಣದಲ್ಲಿ ಒರ್ವ ಪತ್ರಿಕಾ ವಿತರಕನಿಗೆ, ಮೂರು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ, ಒರ್ವ ಎಲ್.ಐ.ಸಿ ಏಜೆಂಟ್ ಗೆ ಕೊರೋನ ಪಾಜಿಟಿವ್ ಬಂದಿದೆ.