264 ಬೈಕ್-15ಆಟೋ- 20ಕಾರು ವಶಕ್ಕೆ ಪಡೆದ ಪೊಲೀಸರು: ಇನ್ನೂ ಸುಮ್ಮನಿರಲ್ಲ ಪೊಲೀಸರು

ರಾಯಚೂರು: ಅನಗತ್ಯವಾಗಿ ರಸ್ತೆಗೆ ಇಳಿದು ಜಿಲ್ಲಾಡಳಿತದ ಆದೇಶ ಪಾಲನೆ ಮಾಡದಿರುವವರಿಗೆ ಪೊಲೀಸರು ಶಾಕ್ ನೀಡಿದ್ದು, ಸಾವಿರಾರೂ ರೂಪಾಯಿ ದಂಡದ ಜೊತೆಗೆ ನೂರಾರೂ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಂದ 63 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಹಾಕದೇ ಅಲೆದಾಡುತ್ತಿದ್ದ 74ಜನರ ವಿರುದ್ಧ ಪ್ರಕರಣ ದಾಖಲಿಸಿ 11200 ರೂಪಾಯಿಗಳ ದಂಡ ವಿಧಿಸಿದ್ದಾರೆ.
ಮೊದಲ ದಿನವೇ 264ಬೈಕುಗಳು, 20 ಕಾರ್‌ಗಳು ಹಾಗೂ 15 ಆಟೋಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದು, ಜನತೆ ಎಚ್ಚೆತ್ತುಗೊಳ್ಳಬೇಕಿದೆ.