ಧಾರವಾಡದಲ್ಲಿ ಸೇವೆ ಸಲ್ಲಿಸಿದ್ದ ಶಿಗ್ಗಾಂವಿ ತಹಶೀಲ್ದಾರಗೂ ಕೊರೋನಾ ಸೋಂಕು: ಕೋವಿಡ್ ಆಸ್ಪತ್ರೆಗೆ ದಾಖಲು
ಹಾವೇರಿ: ನಿರಂತರವಾಗಿ ತಾಲೂಕಿನ ಆಗು ಹೋಗುಗಳ ಬಗ್ಗೆ ಮಾಹಿತಿ ಪಡೆದು ನಿವಾರಣೆ ಮಾಡಲು ತಿರುಗಾಡಿದ್ದ ಶಿಗ್ಗಾಂವಿ ತಹಶೀಲ್ದಾರರಿಗೂ ಕೊರೋನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದ್ದಾರೆ.
ಧಾರವಾಡ ತಾಲೂಕಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದ ಶಿಗ್ಗಾಂವಿ ತಹಶೀಲ್ದಾರರು, ಸೋಂಕು ಹೆಚ್ಚಾಗಿದ್ದ ಪ್ರದೇಶದಲ್ಲೂ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇದೇ ಕಾರಣಕ್ಕೆ ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.
ತಹಶೀಲ್ದಾರರನ್ನ ಈಗಾಗಲೇ ಹಾವೇರಿಯಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.