ಕೊರೋನಾ ಸಮಯದಲ್ಲೂ ನಿಲ್ಲದ ಅಕ್ಕಿ ಕಳ್ಳತನ: ಅಕ್ರಮಕಾರ ಪೊಲೀಸರ ವಶಕ್ಕೆ
ರಾಯಚೂರು: ಅಕ್ಕಿಯನ್ನ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನನ್ನ ಬಂಧಿಸಿರುವ ಘಟನೆ ನಗರದ ಮಂಗಳವಾರಪೇಟೆಯಲ್ಲಿ ನಡೆದಿದೆ.
ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 20 ಕ್ವಿಂಟಾಲ್ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ. ಕಿರಾಣಿ ಅಂಗಡಿ ಮಾಲೀಕ ಜಯರಾಮ, ತನ್ನ ಅಂಗಡಿಯ ಹಿಂಭಾಗದಲ್ಲಿ ದಾಸ್ತಾನು ಮಾಡಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಅಕ್ಕಿಯನ್ನ ವಶಕ್ಕೆ ಪಡೆದು, ಪ್ರಕರಣವನ್ನ ಸದರ ಬಜಾರ ಠಾಣೆಯಲ್ಲಿ ದಾಖಲಿಸಿದ್ದಾರೆ.