ಅಣ್ಣಿಗೇರಿಯಲ್ಲೂ ಆಯುಷ್ ವೈಧ್ಯರ ಪ್ರತಿಭಟನೆ: ಹೋರಾಟ ಅನಿವಾರ್ಯ
ಅಣ್ಣಿಗೇರಿ: ಅಲೋಪತಿ ವೈಧ್ಯರಿಗೆ ಸಂಬಳ ಹೆಚ್ಚಿಸಿದಂತೆ ಆಯುಷ್ ವೈಧ್ಯರ ವೇತನ ಹೆಚ್ಚಿಗೆ ಮಾಡದೇ ಸರಕಾರ ದ್ವಿಮುಖ ನೀತಿಯನ್ನಅನುಸರಿಸುತ್ತಿದೆ ಎಂದು ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಅಣ್ಣಿಗೇರಿ ತಾಲೂಕು ಘಟಕ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.
ಈ ಹಿಂದೆ ನಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿದೇವು. ಆಗ ಸರಕಾರ ನಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವುದಾಗಿ ಹೇಳಿತ್ತಾದರೂ, ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಜೀನಾಮೆ ನೀಡಿರುವುದಾಗಿ ವೈಧ್ಯ ಸಮೂಹ ಹೇಳಿಕೊಂಡಿದೆ.
ಮನವಿ ಸಲ್ಲಿಸುವ ಸಮಯದಲ್ಲಿ ತಾಲೂಕು ಘಟಕದ ಅಧ್ಯಕ್ಷ ಶಂಕರ ಜೋಶಿ, ಕಾರ್ಯದರ್ಶಿ ಡಾ.ಆರ್.ಪಿ.ಅಕ್ಕಿ, ಡಾ.ಎಸ್.ವಿ.ಪಲ್ಲೇದ, ಡಾ.ಎಸ್.ಎಸ್. ಹರ್ಲಾಪೂರ, ಡಾ.ಗುಳ್ಳಣ್ಣವರ, ಡಾ.ತೋಟದ, ಡಾ.ಸದರಭಾಯಿ, ಡಾ.ತಾಹೀರ ಉಪಸ್ಥಿತರಿದ್ದರು.