ನಿರ್ಮಾಲಾನಂದ ಶ್ರೀಗಳನ್ನ ಭೇಟಿ ಮಾಡಿದ ಮುರುಗೇಶ ನಿರಾಣಿ
ಬೆಂಗಳೂರು: ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯನ್ನ ಪಡೆದುಕೊಂಡ ನಂತರ ಈ ಭಾಗದ ಬಹುತೇರನ್ನ ಭೇಟಿ ಮಾಡಲು ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ಮುಂದಾಗುತ್ತಿದ್ದಾರೆ.
ಇಂದು ಆದಿಚುಂಚನಗಿರಿ ಪೀಠಾಧೀಶ ಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿಯವರ 51 ನೇ ಹುಟ್ಟುಹಬ್ಬದ ಪ್ರಯುಕ್ತ ಭೇಟಿ ಮಾಡಿದ ಶುಭಾಶಯ ತಿಳಿಸಿದರು.
ದೇವರು ತಮಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ನೀಡಲಿ. ನಾಡಿಗೆ ತಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದ ನಿರಂತರವಾಗಿರಲಿ ಎಂದು ಕಾಲಭೈರವೇಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದು ಇದೇ ಸಮಯದಲ್ಲಿ ಮುರುಗೇಶ್ ನಿರಾಣಿ ಹೇಳಿದರು.