ಆದೇಶ ಮುರಿದರೇ ಲಾಠಿಯೇಟು ಫಿಕ್ಸ್: ಹುಬ್ಬಳ್ಳಿಯಲ್ಲೇ ಗರಂ ಆಗಿರುವ ಪೊಲೀಸರು
ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ವಾಣಿಜ್ಯನಗರಿಯಲ್ಲಿ ಹೆಚ್ಚಾಗುತ್ತಿದ್ದರೂ ಜನ ಮಾತ್ರ ‘ತಮಗೆ ಸಂಬಂಧವೇ ಇಲ್ಲವೆನ್ನುವಂತೆ ಅಲೆದಾಡುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಪೊಲೀಸರು ಲಾಠಿಗೆ ಕೆಲಸ ಕೊಡಲು ಆರಂಭಿಸಿದ್ದಾರೆ.
ಲಾಕ್ ಡೌನ್ ಗೆ ಕ್ಯಾರೆ ಎನ್ನದೇ ಬೇಕಾಬಿಟ್ಟಿ ತಿರುಗುವವರು ಹಾಗೂ ಸಮಯ ಮೀರಿ ಅಂಗಡಿ ಮುಂಗಟ್ಟು ತೆರೆದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬೆಳಗ್ಗೆ 10.30 ಗಂಟೆಯಾದ್ರೂ ಜನತಾ ಬಜಾರ್ ನ ಅಂಗಡಿಗಳನ್ನು ತೆರೆಯಲಾಗಿತ್ತು. ಹೀಗಾಗಿ ಪೊಲೀಸರು ಅಂಗಡಿ ಮಾಲೀಕರಿಗೆ ಲಾಠಿ ರುಚಿ ತೋರಿಸಿ ಮುಚ್ಚಿಸಿದರು.
ಇನ್ನು ನಗರದ ಚೆನ್ನಮ್ಮ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೇಕಾಬಿಟ್ಟಿಯಾಗಿ ಸಂಚಾರ ಮಾಡುವ ವಾಹನ ಸವಾರರಿಗೂ ಬಿಸಿ ಮುಟ್ಟಿಸಿದ್ದಾರೆ. ಇನ್ನು ಅನಗತ್ಯ ಓಡಾಡುವ ವಾಹನಗಳನ್ನು ಸೀಜ್ ಮಾಡಿದ್ದಾರೆ.