ಧಾರವಾಡ ಮಳೆಗೆ ಹೊಳೆಯಂತಾದ ಟೋಲ್ ನಾಕಾ ಬಳಿಯ ರಸ್ತೆ
ಧಾರವಾಡ: ಮಧ್ಯಾಹ್ನ ಸುರಿದ ಮಳೆಯಿಂದ ಟೋಲ್ ನಾಕಾ ಬಳಿಯ ರಸ್ತೆಯಲ್ಲಿ ನೀರು ನಿಂತಿದ್ದು, ಹೊಳೆಯಾಗಿ ಕಾಣತೊಡಗಿದೆ.
ಹುಬ್ಬಳ್ಳಿ-ಧಾರವಾಡ ಪ್ರಮುಖ ರಸ್ತೆಯಲ್ಲೇ ನಿಲ್ಲುವ ನೀರನ್ನ ಹೊರ ಹೋಗುವಂತೆ ಮಾಡಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಬಿಆರ್ ಟಿಎಸ್ ಕಾಮಗಾರಿಯಾದ ನಂತರವಂತೂ ಇಲ್ಲಿನ ಸ್ಥಿತಿ ಹೇಳತೀರದಾಗಿದೆ.
ಸಣ್ಣ ಮಳೆಯಾದರೂ ಕೂಡ ಮೊಳಕಾಲವರೆಗೆ ಇಲ್ಲಿ ನೀರು ನಿಲ್ಲುವುದರಿಂದ ಬೈಕ್ ಸವಾರರರು ಅನೇಕ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ. ಆದರೂ, ಇದನ್ನ ಸರಿಪಡಿಸಲು ಆಗುತ್ತಿಲ್ಲ.