Posts Slider

Karnataka Voice

Latest Kannada News

ರಾಜ್ಯದಲ್ಲಿಂದು 3648 ಪಾಸಿಟಿವ್ ಪ್ರಕರಣ: 72 ಸೋಂಕಿತರ ಸಾವು

1 min read
Spread the love

ಬೆಂಗಳೂರು: ಕೊರೋನಾ ವೈರಸ್ ಮತ್ತೆ ತನ್ನ ಆವಾಂತರವನ್ನ ಮುಂದುವರೆಸಿದ್ದು, ರಾಜ್ಯದಲ್ಲಿಂದು 3648 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ರಾಜ್ಯದಲ್ಲಿ 72 ಜನರು ಸಾವಗೀಡಾಗಿದ್ದಾರೆ.

ಕೊರೋನಾ ಪಾಸಿಟಿವ್ ಪ್ರಕರಣಗಳು ಲಾಕ್ ಡೌನ್ ಮಾಡಿದ ನಂತರವೂ ಹೆಚ್ಚಾಗುತ್ತಿದ್ದು, ಬೆಂಗಳೂರಲ್ಲಿ ನಿರಂತರವಾಗಿ ಹೆಚ್ಚಾಗುತ್ತಾ ಸಾಗಿದೆ. ರಾಜ್ಯದಲ್ಲಿನ ಒಟ್ಟು ಸಂಖ್ಯೆಯಲ್ಲಿ ಬೆಂಗಳೂರಲ್ಲೇ 1452 ಜನರು ಪಾಸಿಟಿವ್ ಬಂದಿದೆ. ರಾಜಧಾನಿಯಲ್ಲಿ 31ಜನರು ಪ್ರಾಣವನ್ನ ಕಳೆದುಕೊಂಡಿದ್ದಾರೆ.

ಲಾಕ್ ಡೌನ್ ಮಾಡಿದ ನಂತರ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ಕಡಿಮೆಯಾಗಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದ್ದು, ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ.


Spread the love

Leave a Reply

Your email address will not be published. Required fields are marked *