ರೈತರ ಸ್ಮರಣೆಗೆ ಶಾಂತಿಯ ರೂಪ: ಸಾಮಾಜಿಕ ಅಂತರದೊಂದಿಗೆ ಗೌರವ ಸೂಚನೆ
ನವಲಗುಂದ: ದೇಶದ ಯಾವುದೇ ಮೂಲೆಯಲ್ಲಿ ನಿಂತು ನೀವು ನವಲಗುಂದ ಎಂಬ ಹೆಸರನ್ನ ಹೇಳಿದರೆ ಅಲ್ಲಿ ರೈತ ಚಳುವಳಿಯ ಛಾಯೆ ನಿಮ್ಮನ್ನ ತಲುಪದೆ ಇರದು. ಅಷ್ಟರ ಮಟ್ಟಿಗೆ ರೈತ ಚಳುವಳಿಯ ಪ್ರಮುಖ ನೆಲೆಯಾಗಿ ಇಂದು ನವಲಗುಂದ ಪಟ್ಟಣ ತನ್ನನ್ನ ತಾನು ಗುರುತಿಸಿಕೊಂಡಿದೆ.
ಇಲ್ಲಿ ಪ್ರಾರಂಭವಾದ ರೈತ ಚಳುವಳಿಗಳನ್ನೇ ಮೂಲವಾಗಿರಿಸಿಕೊಂಡು ಹತ್ತಾರು ರೈತ ಸಂಘಗಳು ಇಂದು ಹುಟ್ಟಿಕೊಂಡಿವೆ. ಕಳಸಾ-ಬಂಡೂರಿ ಕಿಚ್ಚು ಈ ಎಲ್ಲ ರೈತ ಚಳುವಳಿಗಳಿಗೆ ದಿಕ್ಸೂಚಿಯಂತಿದೆ ಎಂದರೆ ಅತಿಶಯೋಕ್ತಿ ಆಗದು.
ಹಲವು ವರುಷಗಳಿಂದ ಈ ನೆಲದ ರೈತರಿಗಾಗುತ್ತಿರುವ ಅನ್ಯಾಯವನ್ನ, ಮಲತಾಯಿ ದೋರಣೆಯನ್ನ, ಪ್ರಶ್ನಿಸಲು ಬಂದ ರೈತರ ಮೇಲೆ ಅನೇಕ ದೌರ್ಜನ್ಯಗಳು ಇಂದು ಕಣ್ಣೆದುರಿಗೆ ನಡೆದು ಹೋಗಿವೆ.
ಇಂದಿಗೆ ಬರೋಬ್ಬರಿ 40 ವರ್ಷಗಳ ಹಿಂದೆ, ಇದೇ ನೆಲದಲ್ಲಿ ರೈತ ಹೋರಾಟದಲ್ಲಿ ಭಾಗವಹಿಸಿದ್ದ ರೈತರನ್ನ ನಿರ್ದಾಕ್ಷಣ್ಯವಾಗಿ ಗುಂಡು ಹಾರಿಸಿ ಕೊಲ್ಲಲಾಗಿತ್ತು.ಅಂದಿನಿಂದ ಪ್ರತಿ ವರ್ಷ ಈ ದಿನವನ್ನು (ಜುಲೈ 21) ರೈತ ಹುತಾತ್ಮ ದಿನವೆಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಅದರ ಪ್ರಯುಕ್ತವಾಗಿ ಆ ದಿನ ನಡೆದ ಘಟನೆಗಳ ಪಿನ್ ಟು ಪಿನ್ ವಿವರವನ್ನ ಮತ್ತು ರೈತರ ಬಲಿದಾನವನ್ನ, ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನವೇ ಈ ಲೇಖನದ ಮೂಲ ಆಶಯ.

1980ರ ಬಂಡಾಯ
ಕಳಸಾ-ಬಂಡೂರಿಯ ಹೋರಾಟದ ಸಮಯವಂತು ಮತ್ತೇ 1980 ರ ಬಂಡಾಯವನ್ನು ನೆನಪಿಸುವಂತೆ ಮಾಡಿದೆ. 1979ರಲ್ಲಿ ಬರಗಾಲ ಬಿದ್ದಾಗ ಕಾಲುವೆಗಳಿಂದ ರೈತರ ಹೋಲಗಳಿಗೆ ನೀರು ಬರುವುದು ನಿಂತು ಹೋಯಿತು. ಈ ಸಂದರ್ಭದಲ್ಲಿ ಬೆಳೆಯುತ್ತಿದ್ದ ಹತ್ತಿ ಮತ್ತು ಗೋವಿನಜೋಳದ ಬೆಲೆಯೂ ಸಂಪೂರ್ಣವಾಗಿ ಇಳಿಕೆಯಾಯಿತು. ಇದರಿಂದ ರೈತರು ಕಂಗಾಲಾಗಿ ಹೋಗಿದ್ದರು. ಬ್ಯಾಂಕ್‍ಗಳಿಂದ ಮಾಡಿದ ಸಾಲ ತೀರಿಸಲಾಗದೇ ದಿವಾಳಿಯಾಗುವಂತಹ ಪರಿಸ್ಥಿತಿಗೆ ಬಂದು ನಿಂತರು. ವಾಡಿಕೆಯಂತೆ ಮುಂದಿನ ಬೆಳೆಯನ್ನಾದರು ತೆಗೆಯೋನವೆಂದರು ಬೀಜ, ಗೂಬ್ಬರಕ್ಕೇ ಹಣವಿಲ್ಲದಂತಹ ಸಂದಿಗ್ದ ಪರಿಸ್ಥಿತಿ ಅವರದ್ದಾಗಿತ್ತು. ಇಷ್ಟೇಲ್ಲಾ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದರು ಸಹ ನೀರಿನ ಕರ ಮತ್ತು ಬೆಟರ್‍ಮೆಂಟ್ ಲೇವಿ ಅಲ್ಲಿ ಜಾರಿಯಲ್ಲಿತ್ತು ಇದಕ್ಕೇ ಕಂಗೆಟ್ಟ ನವಲಗುಂದ, ನರಗುಂದ ಮತ್ತು ಸವದತ್ತಿಯ ರೈತರು ಹೋರಾಟಕ್ಕೇ ತಯಾರಾಗುವಂತಹ ಲಕ್ಷಣಗಳು ಗೋಚರಿಸತೂಡಗಿದವು. 1979ರ ಡಿಸೆಂಬರ ತಿಂಗಳಲ್ಲಿ ಈ ಹೋರಾಟ ಬಯಲಿಗೆ ಬಂದಿತು. ಇದರ ನೇತೃತ್ವವನ್ನು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮೀತಿಯು ವಹಿಸಿಕೂಂಡಿತು. ಇವರು ನೀರಿನ ಕರ ಮತ್ತು ಬೆಟರ್‍ಮೆಂಟ್ ಲೇವಿ ರದ್ದು ಮಾಡಬೇಕು, ಮತ್ತು ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮವಾದಂತಹ ಬೆಲೆಯನ್ನು ನೀಡಬೇಕೆಂಬ ಬೇಡಿಕೆಗಳೂಂದಿಗೆ ಹೋರಾಟವನ್ನು ಆರಂಭಿಸಿದರು, ಹೋರಾಟ ತೀವ್ರವಾಯಿತು ಸುಮಾರು ಆರು ತಿಂಗಳುಗಳ ಕಾಲ ನಡೆದಂತಹ ಹೋರಾಟಕ್ಕೇ ಸರ್ಕಾರ ಬಗ್ಗಲಿಲ್ಲಾ. ಯಾವ ಪ್ರತಿಭಟನೆಗೂ ಸರ್ಕಾರ ಜಗ್ಗದೆಯಿದ್ದಾಗ 1980 ಜುಲೈ 21 ರಂದು ನರಗುಂದ-ನವಲಗುಂದ ಹಾಗೂ ಸವದತ್ತಿ ತಾಲೂಕ ಬಂದ್‍ಗೆ ಕರೆ ನೀಡಿದ್ದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದ ಕೇಂದ್ರಗಳಿಗೆ ಬಂದಿದ್ದರು. ಆವತ್ತು ರೈತರು ಬೃಹತ್ ಪ್ರತಿಭಟನೆಯ ಮೂಲಕ ಬ್ಯಾಂಕ್ ಮತ್ತು ಅಂಚೆ ಕಚೇರಿಗಳನ್ನು ಬಂದು ಮಾಡಿಸುತ್ತಾ ಬರುತ್ತಿದ್ದರು.
ಇನ್ನು ತಹಸೀಲ್ದಾರ್ ಕಾರ್ಯಾಲಯವನ್ನು ಬಂದ್ ಮಾಡಿಸಲು ರೈತರು ಬಂದಾಗ ರೈತರು ತಹಶೀಲ್ದಾರರನ್ನು ಕಾರ್ಯಾಲಯದ ಒಳಗಡೆ ಬಿಡಲಿಲ್ಲಾ ಆವಾಗಿನ ಜಿಲ್ಲಾಧಿಕಾರಿಗಳು ತಹಶೀಲ್ದಾರರನ್ನು ಕಾರ್ಯಾಲಯದ ಒಳಗಡೆ ಕರೆದುಕೂಂಡು ಹೊಗಬೇಕೆಂದು ಪೋಲಿಸರಿಗೆ ನಿರ್ದೇಶನ ನೀಡಿದರು. ಆಗ ಪೋಲಿಸರು ತಹಶೀಲ್ದಾರರನ್ನು ಕರೆದುಕೂಂಡು ಬರುತ್ತಿದ್ದಾಗ ರೈತರು ರಸ್ತೆಯಲ್ಲಿಯೇ ಮಲಗಿ ಬಿಟ್ಟರು ಆಗ ತಹಶೀಲ್ದಾರರು ರೈತರನ್ನು ತುಳಿದುಕುಂಡೆ ಕಚೇರಿಯೋಳಗೆ ಹೋದರು ಈ ಸುದ್ದಿ ತಾಲೂಕಿನಾದ್ಯಂತ ಹಬ್ಬಿ ಹೋರಾಟ ಮತ್ತೇ ತೀವ್ರವಾಯಿತು ಸಿಟ್ಟಿಗೆದ್ದ ರೈತರು ತಹಶೀಲ್ದಾರರ ಕಚೇರಿಗೆ ಬೆಂಕಿ ಇಟ್ಟರು ಇದರಿಂದ ಅಲ್ಲಿದ್ದಂತಹ ಎಲ್ಲ ದಾಖಲೆಗಳು ಸುಟ್ಟು ಕರಕಲಾಗಿ ಹೋದವು. ಮತ್ತು ಡಿವೈಎಸ್ಪಿಯ ತಲೆಗೆ ಪೆಟ್ಟಾಯಿತು, ತಹಶೀಲ್ದಾರರ ಕಿವಿಗೆ ಗಾಯವಾಯಿತು. ಈ ಮಧ್ಯ ಸಬ್ ಇನ್ಸಪೆಕ್ಟರ್ ಹಾರಿಸಿದಂತಹ ಗುಂಡು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಸಪ್ಪ ಲಕ್ಕುಂಡಿ ಹಾಗೂ ನರಗುಂದ ತಾಲೂಕಿನ ಈರಪ್ಪ ಕಡ್ಲಿಕೂಪ್ಪರಿಗೆ ಬಿದ್ದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಆಗ ಪ್ರತಿಭಟನಾಕಾರರು ಅದೇ ಪೋಲಿಸ್ ಅಧಿಕಾರಿಯನ್ನು ಕೂಂದು ಹಾಕಿದರು ಇದರಿಂದ ಬೆಚ್ಚಿಬಿದ್ದ ಇನ್ನುಳಿದಂತಹ ಪೋಲಿಸರು ತಮ್ಮ ಯೂನಿಪಾರಂಗಳನ್ನು ಕಳೆದು ಕೈಯಲ್ಲಿ ಹಿಡಿದುಕೂಂಡು ಹೋಲವರಿ ಓಡಿ ಹೋಗಿ ಪ್ರಾಣ ಉಳಿಸಿಕೂಂಡರು.
ರೈತರಿಗೂ ಬಿದ್ದಿತ್ತು ಲಾಠಿಯೇಟು
ನೀರನ್ನು ಕೇಳಿ ಹೋರಾಟ ಮಾಡಿದ್ದಕ್ಕೇ 2016 ಅಕ್ಟೋಬರನಲ್ಲಿ ರೈತರಿಗೆ ಮನಬಂದಂತೆ ಪೊಲೀಸರು ಲಾಠಿಯಿಂದ ಹಲ್ಲೇ ಮಾಡಿದ್ದರು. ಸಿಕ್ಕ-ಸಿಕ್ಕವರನ್ನು ಮನೆ ಹೂಕ್ಕು ಕರೆದುಕೂಂಡು ಬಂದು ಬಳ್ಳಾರಿ ಜೈಲಿಗೆ ಹಾಕಿದ್ದು ಮತ್ತು ಅವರ ಮೇಲೆ ಕೂಲೆಯತ್ನದಂತಹ ಕೇಸನ್ನು ದಾಖಲಿಸಿ ನ್ಯಾಯಾಲಯದಲ್ಲಿ ಜಾಮೀನು ಸಿಗದಂತೆ ಮಾಡಿದ್ದೆಲ್ಲಾ ಪೊಲೀಸರು ಹೋರಾಟಕ್ಕೇ ನೀಡಿದಂತಹ ಬಹುಮಾನಗಳು. ಇವರು ರೈತರ ಮೇಲೆ ಗೂಂಡಾ ಕಾಯ್ದೆ, ಕೂಲೆ ಯತ್ನದಂತಹ ಪ್ರಕರಣಗಳನ್ನು ದಾಖಲಿಸಿದ್ದರು.
ಸದ್ಯ ಹುತಾತ್ಮ ರಾಗಿರುವಂತಹ ಬಸಪ್ಪ ಲಕ್ಕುಂಡಿ, ಈರಪ್ಪ ಕಡ್ಲಿಕೊಪ್ಪರವರ ತ್ಯಾಗ ಬಲಿದಾನಕ್ಕಾಗಿ ಜುಲೈ 21 ರಂದು 40ನೆ ವರ್ಷದ ರೈತ ಹುತಾತ್ಮ ದಿನಾಚರಣೆಯ ಆಚರಣೆಯನ್ನು ಕೋವಿಡ್ -19 ರ ವೈರಸ್ ಹಿನ್ನಲೆಯಲ್ಲಿ ಶಾಂತ ರೀತಿಯಲ್ಲಿ ಡಿಸ್ಟೆನ್ಸ್ ಮೆಂಟೇನ್ ಮಾಡುವ ಮೂಲಕ ಅತೀ ಸರಳವಾಗಿ ಆಚರಿಸಲು ಮಲಪ್ರಭಾ ಮಹದಾಯಿ ರೈತ ಹೋರಾಟದ ಒಕ್ಕೂಟ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ತಾಲೂಕಾಡಳಿತವೂ ಸಹಕಾರ ನೀಡಿದ್ದು, ರೈತರಲ್ಲಿ ಮತ್ತಷ್ಟು ಉಮೇದಿಯನ್ನ ಮೂಡಿಸಿದೆ.
