Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಸೋಂಕಿತರಿಂದಲೇ ಮತ್ತಷ್ಟು ಪಾಸಿಟಿವ್: ಪ್ರತಿ ತಾಲೂಕಿಗೂ ಅಂಟಿಕೊಂಡ ಕೊರೋನಾ

1 min read
Spread the love

ಧಾರವಾಡ-200 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆ

ಒಟ್ಟು 2240ಕ್ಕೇರಿದ ಪ್ರಕರಣಗಳ ಸಂಖ್ಯೆ

ಇದುವರೆಗೆ 729 ಜನ ಗುಣಮುಖ ಬಿಡುಗಡೆ

1443 ಸಕ್ರಿಯ ಪ್ರಕರಣಗಳು

ಇದುವರೆಗೆ 68 ಮರಣ

ಧಾರವಾಡ: ಜಿಲ್ಲೆಯಲ್ಲಿ ಇಂದು 200 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 2241 ಕ್ಕೆ ಏರಿದೆ. ಇದುವರೆಗೆ 729 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 1443 ಪ್ರಕರಣಗಳು ಸಕ್ರಿಯವಾಗಿವೆ. 68  ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿಂದು ಪತ್ತೆಯಾಗಿರುವ 200 ಪ್ರಕರಣಗಳಲ್ಲಿ, 101 ಜನರು( ಐಎಲ್ಐ) ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. 75  ಜನರಿಗೆ ಸೋಂಕಿತರ ಸಂಪರ್ಕದಿಂದ ಕೋವಿಡ್ ಬಂದಿದೆ.  ನಾಲ್ವರು ಅಂತರ್‌ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. 17 ಜನರ ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇಬ್ಬರು ( SARI) ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಒಬ್ಬರು ಅಂತರರಾಜ್ಯ ಪ್ರಯಾಣ ಹಿನ್ನೆ ಲೆ ಹೊಂದಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು

ಧಾರವಾಡ ತಾಲೂಕು 

ಕಮಲಾಪುರ, ಬಾಡ ಗ್ರಾಮ, ಕುಮಾರೇಶ್ವರ ನಗರ, ಟೋಲ್ ನಾಕಾ, ವಿದ್ಯಾಗಿರಿ, ಹೊಸಯಲ್ಲಾಪುರ, ಸಪ್ತಾಪೂರ, ಸಂಗೊಳ್ಳಿ ರಾಯಣ್ಣ ನಗರ, ಮಣಿಕಿಲ್ಲಾ, ಎಸ್ ಡಿ ಎಂ ಆವರಣ, ಮುರುಘಾಮಠ ಹತ್ತಿರ, ಗರಗ, ವನಹಳ್ಳಿ ಗ್ರಾಮಗಳು, ಲೈನ್ ಬಜಾರ್, ಲಕ್ಷ್ಮೀಸಿಂಗನಕೇರಿ, ಬನಶ್ರೀ ನಗರ, ಮಾಳಮಡ್ಡಿ, ಸೈದಾಪುರ ದಂಡಿನ ಓಣಿ, ಕರಡಿಗುಡ್ಡ ಗ್ರಾಮ, ಮುಗದ ಗ್ರಾಮ, ಹಿರೇಮಠ ಓಣಿ.

ಹುಬ್ಬಳ್ಳಿ ತಾಲೂಕು

ಮುಲ್ಲಾ ಓಣಿ, ವಿದ್ಯಾ ನಗರ, ಗಂಗಾಧರ ನಗರ, ಶಿವಗಂಗಾನಗರ, ಮಲ್ಲಮ್ಮ ಕಾಲನಿ, ಪರಸಾಪುರ ಕುರುಬರ ಓಣಿ, ಲಕ್ಷ್ಮಿ ಲೇಔಟ್, ನೇಕಾರ ನಗರ, ಶಿರಗುಪ್ಪಿ ಗ್ರಾಮ, ಅಕ್ಷಯ ಕಾಲನಿ, ಜನ್ನತ್ ನಗರ, ಅಂಬೇಡ್ಕರ್ ಕಾಲನಿ, ರಾಜೀವ್ ನಗರ, ಕೌಲಪೇಟ, ಶಕ್ತಿ ಕಾಲನಿ, ಚಿಕ್ಕೇರಿ ಪ್ಲಾಟ್, ಕರ್ಕಿ ಬಸವೇಶ್ವರ ನಗರ, ನಿಜಾಮುದ್ದೀನ ಕಾಲನಿ , ನವನಗರ, ಹಳೆ ಬಾದಾಮಿ ನಗರ, ಅಕ್ಷಯ ಪಾರ್ಕ್, ಮಗಜಿಕೊಂಡಿ ಕಾಲನಿ, ದೇಸಾಯಿ ಕ್ರಾಸ್, ಗಬ್ಬೂರ, ಕಿಮ್ಸ್ ಆವರಣ, ಗೋಕುಲ ರಸ್ತೆ, ವಾಸವಿ ನಗರ, ಪ್ರಶಾಂತ ನಗರ, ಸಂತೋಷ ನಗರ, ಸುಗುಣಾ ಹೈಟ್ಸ್, ಕೃಷ್ಣಾಪುರ ಓಣಿ, ತೊರವಿ ಹಕ್ಕಲ, ಬಾಲಾಜಿ ನಗರ, ರೇಲ್ವೇ ಸ್ಟೇಷನ್, ಪ್ರಜ್ಞಾ ನಗರ, ರೇಲ್ವೇ ಕ್ವಾರ್ಟರ್ಸ್, ರಾಜೇಂದ್ರ ನಗರ, ಕಮರಿಪೇಟ, ಕೊಟ್ಟಣದ ಓಣಿ, ಮಣಿಕಂಠ ನಗರ, ಅಸರಬಂದ್ ಓಣಿ, ಸಿದ್ದೇಶ್ವರ ಪಾರ್ಕ್, ಮಂಟೂರ ರಸ್ತೆ, ಕುಲಕರ್ಣಿ ಹಕ್ಕಲ, ಗೋಪನಕೊಪ್ಪ, ವಿಜಯನಗರ, ಅಂಬಿಕಾ ನಗರ, ತಾರಿಹಾಳದ ರಾಮನಗರ, ಮಯೂರ ನಗರ, ಕೃಪಾನಗರ,ಶೆಟ್ಟಿ ಲೇಔಟ್, ಸುಳ್ಳ ಗ್ರಾಮ, ಕೇಶ್ವಾಪುರ, ಪದ್ಮರಾಜ ನಗರ, ಗೌಡರ ಓಣಿ, ಲಿಂಗರಾಜ ನಗರ, ಮಿಶ್ರಿಕೋಟಿ, ಕೋಲೆಕರ್ ಪ್ಲಾಟ್, ಬಸವೇಶ್ವರ ನಗರ, ವೀರಭದ್ರೇಶ್ವರ ನಗರ, ಶಿವಾಜಿ ಪ್ಲಾಟ್, ಸಿದ್ಧ ಕಲ್ಯಾಣ ನಗರ, ಈಶ್ವರ ನಗರ, ಫತೇಶಾಹ್ ನಗರ, ಚಿಟಗುಪ್ಪಿ ಪಾರ್ಕ್, ಇಂಗಳಹಳ್ಳಿ ಗ್ರಾಮ, ಕುಸುಗಲ್, ಪ್ರಿಯದರ್ಶಿನಿ ಕಾಲನಿ, ಅರವಿಂದ ನಗರ, ಡೊಂಬರ ಓಣಿ, ಬೆಂಗೇರಿ, ಕುಮಾರವ್ಯಾಸ ನಗರ, ನಾಗಶೆಟ್ಟಿಕೊಪ್ಪ, ವಿಕಾಸನಗರ, ಕಸಬಾಪೇಟ ಪೊಲೀಸ್ ಠಾಣೆ, ಲಿಡಕರ್ ಕಾಲನಿ, ವೆಂಕಟೇಶ್ವರ ನಗರ, ಕೋಟಿಲಿಂಗೇಶ್ವರ ನಗರ, ಇಎಸ್ ಐ ಆಸ್ಪತ್ರೆ, ಗುಡಿಹಾಳ.

ಅಳ್ನಾವರ ಜುಮ್ಮಾ ಮಸೀದಿ.

ಕುಂದಗೋಳ ತಾಲೂಕು: ಕುಂದಗೋಳ ಪಟ್ಟಣ, ತರ್ಲಘಟ್ಟ ಗ್ರಾಮ

ಕಲಘಟಗಿ ತಾಲೂಕು:  ಮುತ್ತಗಿ ಗ್ರಾಮ

ನವಲಗುಂದ ತಾಲೂಕು : ನವಲಗುಂದ ಸರ್ಕಾರಿ ಆಸ್ಪತ್ರೆ

ಹಾಗೂ

ಅಣ್ಣಿಗೇರಿಯಲ್ಲಿ ಪ್ರಕರಣಗಳು ಇಂದು ಜಿಲ್ಲೆಯಲ್ಲಿ ವರದಿಯಾಗಿವೆ.


Spread the love

Leave a Reply

Your email address will not be published. Required fields are marked *

You may have missed