ಮಾಜಿ ಸಚಿವ ಮುರುಗೇಶ ನಿರಾಣಿ ಯಡವಟ್ಟು: ಹಿಂದೂ ದೇವರುಗಳ ಬಗ್ಗೆ ವಾಟ್ಸಾಫ್ ಮೆಸೇಜ್
ಬೆಂಗಳೂರು: ದಿನಬೆಳಗಾದರೇ ಹಿಂದೂಗಳ ರಕ್ಷಣೆಯನ್ನ ದೇವರು ಇವರಿಗೆ ಕಾಂಟ್ಯಾಕ್ಟ್ ಕೊಟ್ಟ ರೀತಿಯಲ್ಲಿ ಮಾತನಾಡುವ ಕೆಲವರ ಬಂಡವಾಳಗಳು ಆಗಾಗ ಹೊರ ಬೀಳುತ್ತಲೇ ಇರುತ್ತವೆ. ಅಂಥವರ ಪಾಲಿಗೆ ಇಂದು ಬೆಳಗಿನ ಜಾವವೇ ಮಾಜಿ ಸಚಿವ ಮುರುಗೇಶ ನಿರಾಣಿ ಒಳಗಾಗಿದ್ದಾರೆ.
ಮುರುಗೇಶ ನಿರಾಣಿ ಮೀಡಿಯಾ ಗ್ರೂಫಲ್ಲಿ ಬೆಳ್ಳಂಬೆಳಿಗ್ಗೆ 5.28ಕ್ಕೆ ಮೆಸೇಜ್ ಹಾಕಿರುವ ನಿರಾಣಿ ಅದರಲ್ಲಿ ಹಿಂದೂ ದೇವರುಗಳ ಬಗ್ಗೆ ಅತಿರೇಕವಾಗಿ ಬರೆದುಕೊಂಡಿದ್ದಾರೆ. ಅದರ ಕೆಲವೊಂದು ಸ್ಯಾಂಪಲ್ ಗಳು ಇಲ್ಲಿವೆ ನೋಡಿ..
= ಮಗಳನ್ನೇ ಮದುವೆಯಾದ ಬ್ರಹ್ಮ ನಮ್ಮ ದೇವರು
= ಮಾಡಬಾರದ ಅನಾಚಾರ ಮಾಡಿದ ವಿಷ್ಣು ನಮ್ಮ ದೇವರು
= 16 ಸಾವಿರ ಹೆಂಡಂದಿಯರನ್ನ ಮದುವೆಯಾದ ದನ ಕಾಯುವವ ಕೃಷ್ಣ ನಮ್ಮ ದೇವರು
= ಮುಗ್ಧ ಬಾಲಕಿಯರು ಸರೋವರದಲ್ಲಿ ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದ ತುಡಗು ನಮ್ಮ ದೇವರು
= ತುಂಬು ಗರ್ಭಿಣಿಯನ್ನ ಕಾಡಿಗೆ ಅಟ್ಟಿದ ರಾಮ ನಮ್ಮ ದೇವರು
= ಜರಾಸಂಧನ ಹೆಂಡತಿ ವೃಂದಾಳನ್ನ ಅತ್ಯಾಚಾರ ಮಾಡಿದ ವಿಷ್ಣು ನಮಗೆ ದೇವರು
ಮತ್ತೆ ಅನೇಕ ರೀತಿಯಲ್ಲಿ ಬರೆಯಲಾಗಿದೆ. ಇದಾದ ನಂತರ ಗ್ರೂಫನಲ್ಲಿದ್ದ ಸಚಿವ ಸುರೇಶಕುಮಾರ ಕೂಡಾ ಲೆಪ್ಟ್ ಆಗಿದ್ದಾರೆ. ನಂತರ ಸ್ವತಃ ನಿರಾಣಿಯವರು ಕೂಡಾ, ತಪ್ಪಾಗಿ ಗ್ರೂಫಲ್ಲಿ ಬಂದಿದೆ, ಡಿಲೀಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.
