ರಾಜ್ಯದಲ್ಲಿಂದು 3649 ಕೊರೋನಾ ಪ್ರಕರಣ- 61 ಸಾವು
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂದು ಕೂಡಾ ರಾಜ್ಯದಲ್ಲಿ 3649 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 61 ಜನರು ವೈರಸ್‌ಗೆ ಬಲಿಯಾಗಿದ್ದಾರೆ.
ರಾಜ್ಯದ ಒಟ್ಟು ಸಂಖ್ಯೆಯಲ್ಲಿ 1714 ಜನರು ರಾಜಧಾನಿಯವರೇ ಆಗಿದ್ದಾರೆ. ಬೆಂಗಳೂರಲ್ಲೇ 21 ಜನರು ಮೃತಪಟ್ಟಿದ್ದಾರೆ.
ಕೊರೋನಾ ವೈರಸ್ ಪ್ರಕರಣಗಳು ಪ್ರತಿದಿನವೂ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಹಲವು ಕ್ರಮಗಳನ್ನ ತೆಗೆದುಕೊಂಡರೂ ಪ್ರಯೋಜನವಾಗದೇ ಇರುವುದು ಕಂಡು ಬರುತ್ತಿದೆ.
