ಸಂಸದರು ತಂದ ಅನುದಾನಕ್ಕೆ ಗುದ್ದಲಿ ಹಿಡಿಯದ ಶಾಸಕ: ಐದು ಕೋಟಿ ಕಾಮಗಾರಿ ಪೂಜೆಗೂ ಶಾಸಕರ ಅನುಪಸ್ಥಿತಿ
ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ಮತಕ್ಷೇತ್ರದಲ್ಲಿ ಶಾಸಕರು ಸಂಸದ ಪ್ರಲ್ಹಾದ ಜೋಶಿ ಪರಿಶ್ರಮದಿಂದ ಬಂದ ಕಾಮಗಾರಿ ಉದ್ಘಾಟನೆ ಬಾರದ ಮನೋಭಾವನೆ ಹೊಂದಿದ್ದಾರೆಂದು ಕಾರ್ಯಕರ್ತರು ಮಾತನಾಡಿಕೊಳ್ಳುವ ಸ್ಥಿತಿ ಬಂದೊದಗಿದೆ.
ಇಂತಹ ಮಾತಿಗೆ ಕಾರಣವಾಗಿದ್ದು, ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ 3ರಲ್ಲಿ ಬರುವ ಮನಗುಂಡಿ ಗ್ರಾಮದಿಂದ ಬೆನಕನಕಟ್ಟಿ ವಾಯಾ ನಿಗದಿವರೆಗೆ ರಸ್ತೆ ಸುಧಾರಣೆ ಕಾಮಗಾರಿಯು ಕಲಘಟಗಿ ಮತಕ್ಷೇತ್ರದಲ್ಲಿ ಬರತ್ತೆ. ಅಷ್ಟೇ ಅಲ್ಲ, ಕಾಮಗಾರಿಯೂ 5ಕೋಟಿ 86ಲಕ್ಷ ರೂಪಾಯಿಯ ವೆಚ್ಚವನ್ನ ಹೊಂದಿದೆ. ತಮ್ಮದೇ ಕ್ಷೇತ್ರದಲ್ಲಿ ಇಂತಹದೊಂದು ದೊಡ್ಡ ಕಾಮಗಾರಿ ನಡೆಯುತ್ತಿದ್ದಕ್ಕೆ ಪೂಜೆ ನಡೆದರು ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ ತೆರಳದೇ ತಮ್ಮಲ್ಲಿರುವ ಅಸಮಾಧಾನವನ್ನ ಹೊರ ಹಾಕಿದ್ದಾರೆನ್ನಲಾಗಿದೆ.
ಇದೇ ಕಾರಣಕ್ಕೆ ಗ್ರಾಮಸ್ಥರೇ ಕೂಡಿಕೊಂಡು ಕಾಮಗಾರಿಗೆ ಪೂಜೆ ಸಲ್ಲಿಸಿದರು. ಬಸವರಾಜ ಗುಂಡಗೋವಿ, ಕಲ್ಮೇಶ ಬೇಲೂರ, ಕರಿಯಪ್ಪ ಅಮ್ಮಿನಬಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.