ಬಿಜೆಪಿ ಶಾಸಕರ ಅಧಿಕಾರ ದರ್ಪ: ಬೀದಿಗೆ ಬಿದ್ದ ತಹಶೀಲ್ದಾರ- ಈ ಸರಕಾರದಲ್ಲಿ ಎಲ್ಲವೂ ನಡೀಯತ್ತಾ..?
ಚಿಕ್ಕೋಡಿ: ತಮ್ಮ ಮಾತನ್ನು ಕೇಳಲಿಲ್ಲ ಎಂದು ವರ್ಗಾವಣೆ ಮಾಡಿದ್ದ ತಹಶೀಲ್ದಾರರನ್ನ ಇರಲು ಜಾಗವೇ ಇಲ್ಲದ ಹಾಗೇ ಮಾಡಿ ತಮ್ಮ ದರ್ಪವನ್ನ ಶಾಸಕರೋರ್ವರು ತೋರಿರುವ ಘಟನೆ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ತಹಶೀಲ್ದಾರ ಚಂದ್ರಕಾಂತ ಭಜಂತ್ರಿಯವರನ್ನ ರಾಯಭಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವರ್ಗಾವಣೆ ಮಾಡಿಸಿದ್ದರು. ಇದನ್ನ ಪ್ರಶ್ನಿಸಿ ಕೆಎಟಿಗೆ ಅಧಿಕಾರಿ ಹೋಗಿದ್ದರಿಂದ ತಮ್ಮದೇ ಕ್ವಾಟರ್ಸನಲ್ಲಿದ್ದರು. ಅಲ್ಲಿ ಮೊದಲು ಸಮಸ್ಯೆ ಮಾಡಿದಾಗ ಚೆನ್ನಮ್ಮ ವಸತಿ ನಿಲಯದ ಕ್ವಾಟರ್ಸನಲ್ಲಿ ವಾಸ್ತವ್ಯ ಹೂಡಿದ್ದರು.
ತಹಶೀಲ್ದಾರರು ಅಲ್ಲಿರುವುದು ಗೊತ್ತಾಗುತ್ತಿದ್ದಂತೆ ರಾತೋರಾತ್ರಿ ಚನ್ನಮ್ಮ ವಸತಿ ನಿಲಯದ ಕ್ವಾಟರ್ಸ್ ನಿಂದ ತಹಸಿಲ್ದಾರ್ ಕಿಕ್ ಔಟ್ ಮಾಡಲಾಗಿದೆ. ಗಂಟು ಮೂಟೆ ಕಟ್ಟಿಕೊಂಡು ಬೀದಿಗೆ ಬಿದ್ದಿರುವ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಶಾಸಕರು ಮಾಡಿದ ಅನ್ಯಾಯವನ್ನ ಹೇಳುವಂತಾಗಿದೆ.
ನಿರಂತರವಾಗಿ ಕಿರುಕುಳವನ್ನ ಶಾಸಕರು ನೀಡುತ್ತಲೇ ಬಂದಿದ್ದಾರೆ. ನನಗೆ ಅನ್ಯಾಯವಾಗಿದ್ದರಿಂದ ನಾನು ಕೆಎಟಿ ಮೊರೆ ಹೋಗಿದ್ದೇನೆ. ಅದರ ತೀರ್ಮಾನ ಬರುವತನಕ ಸರಿಯಾಗಿ ಬದುಕಲು ಕೂಡಾ ಕೊಡುತ್ತಿಲ್ಲವೆಂದು ತಹಶೀಲ್ದಾರ ಭಜಂತ್ರಿ ಹೇಳುತ್ತಿದ್ದಾರೆ.
ಬಿಜೆಪಿ ಶಾಸಕನಿಂದ ನೊಂದಿರುವ ತಹಶೀಲ್ದಾರ ಭಜಂತ್ರಿ ಅವರಿಗೆ ನೀವು ಬೆಂಬಲ ನೀಡಬೇಕೆಂಬ ಮನಸ್ಸಿದ್ದರೇ ಅವರ ಮೊಬೈಲ್ ಸಂಖ್ಯೆ 9880026431 ಗೆ ಕಾಲ್ ಮಾಡಿ ಧೈರ್ಯ ಹೇಳಿ. ನ್ಯಾಯಕ್ಕೆ ಬೆಲೆಯಿದೆ ಎಂಬ ಮಾತನ್ನ ಹೇಳಿ.