ಸೋಂಕಿತನ ಶವ ಬಿಟ್ಟು ಪರಾರಿ: ಕಳೆದು ಹೋದ ಮಾನವೀಯತೆ: ಕಣ್ಣು ಮುಚ್ಚಿಕೊಂಡ ರಾಯಚೂರು ಜಿಲ್ಲಾಡಳಿತ Exclusive video
ರಾಯಚೂರ: ಕೊರೋನಾ ಸೋಂಕಿತನ ಶವ ಬಿಸಾಕಿ, ಪಿಪಿಇ ಕಿಟ್ ಧರಿಸಿ ಶ್ರಧ್ದಾಂಜಲಿ ವಾಹನ ಹತ್ತಿದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡದೆ ಪರಾರಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸೋಂಕಿತನ ಶವದ ಜತೆಗೆ ತೆರಳ್ತಿದ್ದ ಸಿಬ್ಬಂದಿ ಮಾರ್ಗ ಮಧ್ಯ ಶ್ರದ್ಧಾಂಜಲಿ ವಾಹನ ನಿಲ್ಲಿಸಿ ಕೆಳಗಿಳಿದು ಪರಾರಿಯಾಗಿದ್ದು, ಕನಿಷ್ಠ ಮಾನವೀಯತೆಯೂ ಇಲ್ಲದ ರೀತಿಯಲ್ಲಿ ರಿಮ್ಸ್ ಸಿಬ್ಬಂದಿ ನಡೆದುಕೊಂಡಿದ್ದಾರೆ.
ಶ್ರದ್ಧಾಂಜಲಿ ವಾಹನ ಚಾಲಕ ಮಾತ್ರ ಶವ ಕೊಂಡೊಯ್ದು ವಾಹನದಲ್ಲಿದ್ದ ಒಂದು ಪಿಪಿಇ ಕಿಟ್ ಮೃತ ಸೋಂಕಿತನ ಸಂಬಂಧಿಕರಿಗೆ ಕೊಟ್ಟು ಸ್ಥಳದಿಂದ ಚಾಲಕ ಕಾಲ್ಕಿತ್ತಿದ್ದಾನೆ.
ಮೃತ ಸೋಂಕಿತನ ಸಂಬಂಧಿಕರಿಂದಲ್ಲಿ ಒಬ್ಬ ಮಾತ್ರ ಪಿಪಿಇ ಕಿಟ್ ಧರಿಸಿ ಗ್ರಾಮಸ್ಥರ ಜತೆಗೂಡಿ ಶವ ಹೊತ್ತುಕೊಂಡು ಹೋಗಿ ಗುಂಡಿಗೆ ಹಾಕಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಲಿಂಗಸುಗೂರ ತಾಲೂಕಿನ ಆನೆ ಹೊಸುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಲಿಂಗಸುಗೂರ ತಹಶೀಲ್ದಾರ ಮತ್ತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗ್ರಾಮಸ್ಥರೇ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.