ನನ್ನ ತ್ಯಾಗಕ್ಕೆ ಅವಕಾಶ ಸಿಕ್ಕಿದೆ- ಇದು ಸಹಾಯವಲ್ಲ: ಎಚ್.ವಿಶ್ವನಾಥ
ಮೈಸೂರು: ನಾನು ಯಾವುದೇ ಕಾದಂಬರಿ ಬರೆದವನಲ್ಲ. ರಾಜಕೀಯ ಸಾಹಿತ್ಯ ಬರೆದಿದ್ದೇನೆ. ನನ್ನನ್ನು ಸಾಹಿತ್ಯ ವಲಯದಿಂದ ಗುರುತಿಸಿ ಸ್ಥಾನ ನೀಡಿದ್ದಾರೆ. ರಾಜಕೀಯ ಸಾಹಿತ್ಯ ಬರೆದವರು ಅಪರೂಪ ಎಂದು ನೂತನವಾಗಿ ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಯಾದ ಎಚ್.ವಿಶ್ವನಾಥ ಹೇಳಿದರು.
ರಾಜಕೀಯ ವಸ್ತು ಸ್ಥಿತಿ ಬರೆದವನು ನಾನು. ಅದನ್ನ ಗುರುತಿಸಿ ಸಾಹಿತ್ಯ ವಲಯದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ಇದು ಸಹಾಯವಲ್ಲ, ನನ್ನ ತ್ಯಾಗ ಮತ್ತು ಕೊಡುಗೆಗೆ ಪಕ್ಷ ಗೌರವಿಸಿದೆ ಎಂದರು.
ಆಯ್ಕೆ ವಿಚಾರದಲ್ಲಿ ಯಾವುದೇ ತಾಂತ್ರಿಕ ಗೊಂದಲಗಳಿಲ್ಲ. ಯಾವ ಕಾನೂನಿನ ಅಡೆತಡೆಗಳಿಲ್ಲ ಎಂದು ಮೈಸೂರಿನಲ್ಲಿ ನೂತನ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದರು.
 
                       
                       
                       
                       
                      
 
                         
                 
                 
                