ಟೆಸ್ಟ್‌ಗೆ ಕೊಟ್ಟು 11 ದಿನವಾದರೂ ಬಾರದ ರಿಪೋರ್ಟ್: ಆಸ್ಪತ್ರೆಗೆ ಬೀಗ
ಕಲಬುರಗಿ: ಸಾರ್ವಜನಿಕರ ಜೊತೆ ಚೆಲ್ಲಾಟವಾಡ್ತಿರೋ ಜಿಮ್ಸ್ ಕೊವಿಡ್ ಆಸ್ಪತ್ರೆ. ಸಂಗಮೇಶ್ವರ ಕಾಲೋನಿ ನಿವಾಸಿ ಸುಲೋಚನಾ ಜ್ವರದಿಂದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿಯ ವೈದ್ಯರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹೇಳಿದ್ದರಿಂದ, ಜುಲೈ 13 ರಂದು ನಗರದ ಡಾ ಮಲ್ಲರಾವ್ ಮಲ್ಲೆ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು 11 ದಿನಗಳಾದರು ಜಿಮ್ಸ್ ರಿಪೋಟ್೯ ನೀಡದಿರುವುದರಿಂದ ಆಸ್ಪತ್ರೆಗೆ ಬೀಗ ಹಾಕಲಾಗಿದೆ.
ಸದ್ಯ ಟೆಸ್ಟ್ ಮಾಡಿಸಿಕೊಂಡು ಮನೆಗೆ ತೆರಳಲು ಹಿಂದೆಟು ಹಾಕ್ತಿರೋ ಸುಲೋಚನ ಮತ್ತು ಪತಿ ಸಂಗಪ್ಪಾ. ನಾವು ಕೊರೋನಾ ಟೆಸ್ಟ್ ಮಾಡಿಸಿಕೊಂಡವರು, ಮನೆಯಲ್ಲಿ ಮಕ್ಕಳು ವಯಸ್ಸಾದವರು ಇದ್ದಾರೆ. ನಮಗೆ ಕೊರೋನಾ ಬಂದರು ಬರಲಿ, ಮನೆಗೆ ಮಾತ್ರ ಹೋಗಲ್ಲ ಎಂದು ದಂಪತಿಗಳು ಪಟ್ಟು ಹಿಡಿದಿದ್ದಾರೆ.
11 ದಿನಗಳಾದರು ರಿಪೋಟ್೯ ಬಾರದ ಹಿನ್ನಲೆ, ರೊಚ್ಚಿಗೆದ್ದ ಸುಲೋಚನ ಪತಿ ಸಂಗಪ್ಪ, ಡಾ:ಮಲ್ಲರಾವ್ ಮಲ್ಲೆ ಆಸ್ಪತ್ರೆಗೆ ಬೀಗ ಹಾಕಿದ್ರು.
ಇದೀಗ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ 4500 ರೂಪಾಯಿ ಹಣ ಕಟ್ಟಿ ಸುಲೋಚನ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಸಾರ್ವಜನಿಕರ ಜೊತೆ ಚೆಲ್ಲಾಟವಾಡ್ತಿರೋ ಕಲಬುರಗಿ ಜಿಮ್ಸ್ ವಿರುದ್ಧ ತೀವ್ರ ಆಕ್ರೋಶ