ಕಲಬುರಗಿಯಲ್ಲಿ ಧಾರಾಕಾರ ಮಳೆ: ನೀರಲ್ಲಿ ಕೊಡಗಳ ಸಮೇತ ಕೊಚ್ಚಿ ಹೋದವ- ಕೊಡ ಬಿಟ್ಟು ಬಚಾವಾದ
ಕಲಬುರಗಿ: ಜಿಲ್ಲೆಯಾಧ್ಯಂತ ಮಳೆ ಧಾರಾಕಾರ ಸುರಿಯುತ್ತಿದ್ದು, ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳ ದಾಟುವಾಗ ಕೊಡ ಮಾರುತ್ತಿದ್ದ ವ್ಯಕ್ತಿಯೋರ್ವ ನೂರಾರೂ ಕೊಡಗಳ ಸಮೇತ ಕೊಚ್ಚಿ, ಕೆಲ ಸಮಯದ ನಂತರ ಬಚಾವಾಗಿ ಬಂದ ಘಟನೆ ನಡೆದಿದೆ.
ಆಳಂದ ತಾಲೂಕಿನ ಯಳಸಂಗಿ-ನಿಂಬಾಳ ಗ್ರಾಮದ ಬಳಿಯಿರುವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಕೆಲ ಸಮಯದ ಸ್ಥಳೀಯರ ಸಹಾಯದಿಂದ ಪಾರಾಗಿ ಬಂದಿದ್ದಾನೆ. ಆದ್ರೇ, ಉಪಜೀವನಕ್ಕೆ ಸಾಥ್ ಕೊಡಬೇಕಿದ್ದ ಕೊಡಗಳು ನೀರಲ್ಲಿ ತೇಲಿಕೊಂಡು ಹೋಗಿವೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಕೆಲವು ಗ್ರಾಮಗಳ ರಸ್ತೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಕೆರೆಗಳು ತುಂಬಿ ಹರಿಯುತ್ತಿದ್ದು, ಕೋಡಿಗಳು ಒಡೆದು ರಸ್ತೆಯನ್ನ ನುಂಗುತ್ತಿವೆ.