ಮಾರ್ಕೋಪೋಲೊ ಉದ್ಯೋಗಿಯ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದೇ ಕೊರೋನಾ ಭಯದಿಂದ…!
ಧಾರವಾಡ: ಮಾರ್ಕೋಪೋಲೊ ಕಂಪನಿಯ ಉದ್ಯೋಗಿ ತನ್ನ ಮಡದಿ ಮತ್ತು ಮಗುವಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಕೊರೋನಾ ಭಯವೇ ಕಾರಣವೆಂದು ಹೇಳಲಾಗಿದ್ದು, ಈ ಸಂಬಂಧ ಡೆತ್‌ನೋಟಲ್ಲಿ ಮಾಹಿತಿಯಿದೆ ಎಂದು ಮೃತನ ಸಹೋದರ ಮಾಹಿತಿ ನೀಡಿದ್ದಾರೆ.
ಧಾರವಾಡದ ಮೆಹಬೂಬನಗರದ ಕವಳಿಕಾಯಿ ಚಾಳದಲ್ಲಿ ಕಳೆದ ಮೂರು ವರ್ಷದಿಂದ ಬಾಡಿಗೆಗಿದ್ದ ಮೌನೇಶ ಪತ್ತಾರ ತನಗೆ ಜ್ವರ ಬಂದಿರೋದು, ಮಗಳಿಗೆ ಜ್ವರ ಕಡಿಮೆಯಾಗದೇ ಇರುವುದು ಮತ್ತು ಮಡದಿಗೆ ಲೋ ಬಿಪಿಯಾಗಿರುವುದನ್ನೇ ಕೊರೋನಾ ಬಂದಿದೆಯಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಡಿಗೆ ಮನೆಗೆ ಸಂಬಂಧಿಕರು ಆಗಮಿಸಿದ್ದು, ಮುಂದಿನ ಕಾರ್ಯಗಳಿಗೆ ಶವಗಳನ್ನ ಆಸ್ಪತ್ರೆಗೆ ರವಾನಿಸಲಾಗಿದೆ.