ರಾಜ್ಯದಲ್ಲಿಂದು 5199 ಪಾಸಿಟಿವ್- 82 ಜನ ಸೋಂಕಿತರ ಸಾವು: ಲಕ್ಷದ ಸಮೀಪ ಕೊರೋನಾ ಕೇಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗಿದ್ದು, ಇಂದು ಕೂಡಾ ರಾಜ್ಯಾಧ್ಯಂತ 5199 ಪ್ರಕರಣಗಳು ಪತ್ತೆಯಾಗಿದ್ದು, 82 ಜನರು ಸಾವಿಗೀಡಾಗಿದ್ದಾರೆ.
ಜಿಲ್ಲೆಗಳ ಮಾಹಿತಿಯ ಪ್ರಕಾರ ಬಳ್ಳಾರಿಯಲ್ಲಿ ಇಂದು ಒಂದೇ ದಿನ 579 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬೀದರನಲ್ಲಿ 77 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ.
ಇಂದು ರಾಜ್ಯದ 82 ಸಾವಿನಲ್ಲಿ ರಾಜಧಾನಿಯೊಂದರಲ್ಲೇ 29 ಜನರು ಸಾವಿಗೀಡಾಗಿದ್ದಾರೆ.
ಇಂದು 2088 ಜನರು ಬಿಡುಗಡೆಯಾಗಿದ್ದಾರೆ.