ಶ್ರಾವಣದ ಮೊದಲ ಸೋಮವಾರ: ಶರಣಬಸವೇಶ್ವರ ಸನ್ನಿಧಿಯಲ್ಲಿ ಏನು ನಡೀತಿದೆ ಗೊತ್ತಾ…!
ಕಲಬುರಗಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಶರಣಬಸವೇಶ್ವರ ದೇವರ ದರ್ಶನಕ್ಕಾಗಿ ಸಾವಿರಾರೂ ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದು, ಶ್ರಾವಣ ಸೋಮವಾರದ ಪೂಜೆಯನ್ನ ಸಲ್ಲಿಸುತ್ತಿದ್ದಾರೆ.
ಕೊರೋನಾದಿಂದ ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಆತಂಕ ಹೆಚ್ಚಾಗಿದ್ದರೂ ಶರಣನ ದರ್ಶನ ಪಡೆದು ನೆಮ್ಮದಿ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 64 ಜಮ ಸೋಂಕಿನಿಂದ ಸಾವಿಗೀಡಾಗಿದ್ದು, ಒಟ್ಟು 3500ಜನರಿಗೆ ಸೋಂಕು ತಗುಲಿದೆ.
ಶರಣಬಸವೇಶ್ವರನ ಸನ್ನಿಧಿಗೆ ಬಂದಿರುವ ಬಹುತೇಕರು ಮಾಸ್ಕ್ ಕೂಡಾ ಧರಿಸಿಲ್ಲ. ಸಾಮಾಜಿಕ ಅಂತರದ ಮಾತನ್ನ ಯಾರೂ ಪಾಲಿಸುತ್ತಿಲ್ಲವಾದರೂ ಅವರಿಗೆ ದೇವರ ದರ್ಶನ ಪಡೆದು ಫುನೀತರಾಗುವ ಭಾವನೆ ಹೊಂದಿದ್ದಾರೆ.