ರೈತರ ಹೊಟ್ಟೆಗೆ ಚೂರಿ ಹಾಕಿದ ಯಡಿಯೂರಪ್ಪ ಸರಕಾರ: ಕರ್ನಾಟಕ ರಾಜ್ಯಪತ್ರಕ್ಕೆ ಬೆಂಕಿ
ಹುಬ್ಬಳ್ಳಿ: ರೈತರ ಬೆನ್ನಿಗೆ ಚೂರಿ ಹಾಕುವ ಕಾಯ್ದೆಯಂದು ಆರೋಪಿಸಿದ ಭಾರತೀಯ ಕಿಸಾನ್ ಸಂಘ ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆಯ ರಾಜ್ಯ ಸರ್ಕಾರದ ಕರಪತ್ರ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ತಂದಿದ್ದು, ಇದು ರೈತರಿಗೆ ಬೆನ್ನಿಗೆ ಚೂರಿ ಹಾಕುವುದಲ್ಲ ಬದಲಿಗೆ ಸೀದಾ ರೈತರ ಹೊಟ್ಟೆಗೆ ಚೂರಿಯನ್ನು ಹಾಕುವ ಕೆಲಸ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಕಾಯ್ದೆಯಿಂದ ರೈತರೆಲ್ಲರೂ ತಮ್ಮ ಭೂಮಿಗಳನ್ನು ಕಳೆದುಕೊಂಡು, ಯಾರು ಆ ಭೂಮಿಯನ್ನು ಖರೀದಿ ಮಾಡಿರುತ್ತಾರೋ ಅಂತವರ ಬಳಿ ತಮ್ಮ ಹೊಲದಲ್ಲಿಯೇ ಕಾರ್ಯವನ್ನು ಮಾಡುವ ಪ್ರಸಂಗ ಬರುತ್ತದ್ದೇ ಎಂದು ಆತಂಕವ್ಯಕ್ತಪಡಿಸಿದರು.
ತಹಶೀಲ್ದಾರ ಕಚೇರಿ ಎದುರು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿವೇಕ ಮೋರೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಕರಪತ್ರವನ್ನು ಸುಟ್ಟು ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.