ಕರಡಿಗುಡ್ಡ-ಹುಬ್ಬಳ್ಳಿ- ಧಾರವಾಡದಲ್ಲಿ ಎಂಟು ಕೊರೋನಾ ಸೋಂಕಿತರ ಸಾವು
1 min readಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಎಂಟು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ-86422 (82,ಪುರುಷ) ಧಾರವಾಡ ಮರಾಠ ಕಾಲೋನಿ ನಿವಾಸಿ.
ಪಿ-91096 (51, ಪುರುಷ) ಹಳೇ ಹುಬ್ಬಳ್ಳಿಯ ಅಯೋಧ್ಯ ನಗರ ನಿವಾಸಿ.
ಪಿ-77293(60 ,ಪುರುಷ) ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರ ನಿವಾಸಿ.
ಪಿ-68111 (75, ಪುರುಷ) ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ ನಿವಾಸಿ.
ಪಿ-76970 ( 48, ಪುರುಷ) ಹುಬ್ಬಳ್ಳಿಯ ಸಿಬಿಟಿ ಮಕಾಂದರ್ ಗಲ್ಲಿ ನಿವಾಸಿ.
ಪಿ- 65342 (72, ಪುರುಷ) ಕರಡಿಗುಡ್ಡ ಗ್ರಾಮ ನಿವಾಸಿ.
ಪಿ-76894 (55, ಪುರುಷ) ಧಾರವಾಡ ಟೋಲ್ ನಾಕಾ ನಿವಾಸಿ
ಪಿ- 55303 (53, ಮಹಿಳೆ) ಹುಬ್ಬಳ್ಳಿಯ ಕೌಲಪೇಟ, ಹೊಸಮನಿ ಕಾಲನಿಯ ಮೋಮಿನ್ ಪ್ಲಾಟ್ ನಿವಾಸಿ.
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.