Posts Slider

Karnataka Voice

Latest Kannada News

ದೇಶಪಾಂಡೆ ಫೌಂಡೇಷನ್ ಸ್ಕೀಲ್ ಸೆಂಟರ್ ಇನ್ಮುಂದೆ ಕೊರೋನಾ ಸೆಂಟರ್

Spread the love

ಹುಬ್ಬಳ್ಳಿ: ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡ ಬಳಿಕವೂ ಕೊರೊನಾ ಸೋಂಕು ಹರಡುವುದು ಹೆಚ್ಚಾಗುತ್ತದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲಾದ್ಯಂತ 6000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಸಿದ್ಧಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.


ಹುಬ್ಬಳ್ಳಿಯ ಇಂದು ಅಶೋಕ ಹಾಸ್ಪಿಟಲ್ ಪ್ರಾರಂಭಿಸಲಾಗಿರುವ 50 ಹಾಸಿಗೆಗಳ ಕೋವಿಡ್ ಹಾಸ್ಪಿಟಲ್ ಹಾಗೂ ದೇಶಪಾಂಡೆ ಫೌಂಡೇಶನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಆರಂಭಿಸಲಾಗಿರುವ 800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿ್ಗೆಗೆ ಸಭೆ ನಡೆಸಿದ ಬಳಿಕ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ನೀಡಲು ಹಲವು ಆಸ್ಪತ್ರೆ ಗಳು ಮುಂದೆ ಬಂದಿವೆ. ಹುಬ್ಬಳ್ಳಿಯ ಡಾಕ್ಟರ್ ಅಶೋಕ್ ಬಂಗಾರಶೆಟ್ಟರ್ ಅವರು ತಮ್ಮ ಆರ್ಥೋಪಿಡಿಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾ ಆಡಳಿತಕ್ಕೆ ನೀಡಿದ್ದಾರೆ. ಡಾ. ಕ್ರಾಂತಿ ಕಿರಣ್ ರವರ ಬಾಲಾಜಿ ಹಾಸ್ಪಿಟಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅವರು ಸೂಕ್ತ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ಆಸ್ಪತ್ರೆಯಲ್ಲಿ ನಿಯೋಜಿಸಿದ್ದಾರೆ. ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಹಾಸ್ಪಿಟಲ್ ಎಂದು ಘೋಷಿಸಲಾಗಿದೆ. ಇದೇ ಮಾದರಿಯಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಒಡಂಬಡಿಕೆ ಮಾಡಿಕೊಂಡು ಹಾಸಿಗೆಗಳನ್ನು ಹಾಗೂ ಸೂಕ್ತ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾಡಳಿತದ ನೆರವಿಗೆ ನೀಡಲು ಸಿದ್ದವಾಗಿವೆ. ಗುರುರಾಜ ದೇಶಪಾಂಡೆಯವರು ಸ್ಥಾಪಿಸಿರುವ ದೇಶಪಾಂಡೆ ಫೌಂಡೇಶನ್ ಸಹಕಾರದೊಂದಿಗೆ ಸಂಸ್ಥೆಯ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಲಕ್ಷಣ ರಹಿತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು 800 ಹಾಸಿಗೆಗಳ ಕೇರ್ ಸೆಂಟರ್ ಅನ್ನು ಆರಂಭಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕೋವಿಡ್ ರೋಗಿಗಳ ನಿರಿಸಿ ಚಿಕಿತ್ಸೆ ನೀಡುವುದು ಜಿಲ್ಲಾಡಳಿತಕ್ಕೆ ಕಷ್ಟವಾಗಿತ್ತು. ಒಂದು ಸ್ಥಳದಲ್ಲಿ 800 ಜನರನ್ನು ಇರಿಸಿ ಅವರ ಆರೋಗ್ಯ ತಪಾಸಣೆ ಮಾಡುವುದಕ್ಕೆ ಹಾಗೂ‌ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗಿದೆ. ಜಿಲ್ಲಾಡಳಿತದ ವತಿಯಿಂದ ರೋಗಿಗಳಿಗೆ ಬೆಡ್,ದಿಂಬು, ಹೋದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಸೋಪು, ಎಣ್ಣೆ, ಬ್ರಷ್ ಸೇರಿದಂತೆ ಅಗತ್ಯ ವಸ್ತಗಳನ್ನುವ ಕಿಟ್ ಗಳನ್ನು ಕೊವೀಡ್ ಕೇರ್ ಸೆಂಟರ್ ನಲ್ಲಿ ನೀಡಲಾಗುವುದು. ರೋಗಿಗಳಿಗೆ ಬೇಸರ ಆಗದಿರಲು ಕೇರಂ, ಚೆಸ್, ಸೇರಿದಂತೆ ಇತರೆ ಆಟದ ಸಾಮಾನು ಹಾಗೂ ಪುಸ್ತಕಗಳನ್ನು ಸೆಂಟರ್ ನಲ್ಲಿ ಇಡಲಾಗಿದೆ.


ದೇಶಪಾಂಡೆ ಫೌಂಡೇಶನ್ ವತಿಯಿಂದ ಲಕ್ಷಣ ರಹಿತ ರೋಗಿಗಳಿಗೆ ಆನ್ಲೈನ್ ಮೂಲಕ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. ಆತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಇದಾಗಿದೆ. ಕೋವಿಡ್ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಅಶೋಕ್ ಹಾಸ್ಪಿಟಲ್ ಹಾಗೂ ದೇಶಪಾಂಡೆ ಫೌಂಡೇಶನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಆಡಳಿತದ ಕೋರಿಕೆಗೆ ಹಲವು ಖಾಸಗಿ ಆಸ್ಪತ್ರೆಗಳು ಸ್ಪಂದಿಸುತ್ತಿವೆ. ಸಿಟಿ ಕ್ಲಿನಿಕ್ ಸೇರಿದಂತೆ ಹಲೋ ಸಣ್ಣಪುಟ್ಟ ಹೆರಿಗೆ ಆಸ್ಪತ್ರೆಗಳು ಒಟ್ಟಾಗಿ ಬಂದು ಮನವಿ ಸಲ್ಲಿಸಿ ಪತ್ರವನ್ನು ನೀಡಿದ್ದಾರೆ. ಹೆರಿಗೆ ಪ್ರಕರಣಗಳು ಇರುವ ಕಡೆ ಕೋವಿಡ್ ರೋಗಿಗಳನ್ನು ದಾಖಲಿಸುವುದರಿಂದ ಚಿಕ್ಕ ಮಕ್ಕಳಿಗೆ ತೊಂದರೆಯಾಗಬಹುದು. ಎಲ್ಲಾ ಆಸ್ಪತ್ರೆಗಳು ವತಿಯಿಂದ 52 ವೈದ್ಯಕೀಯ ಹಾಗೂ ನರ್ಸ್ ಸಿಬ್ಬಂದಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಇವರು ಕೋವಿಡ್ ಹಾಸ್ಪಿಟಲ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದರಿದ್ದಾರೆ. ಧಾರವಾಡದ ಸಣ್ಣಪುಟ್ಟ ಖಾಸಗಿ ಆಸ್ಪತ್ರೆಗಳು ಒಟ್ಟಾಗಿ ಒಂದೇಡೆ 65 ಹಾಸಿಗೆಗಳನ್ನು ಕೋವಿಡ್ ಸಲುವಾಗಿ ನೀಡಿ, ಚಿಕಿತ್ಸೆ ನೀಡಲು ಸಹ ಮುಂದೆ ಬಂದಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬೆಡ್‌ಗಳಿದ್ದು ಏಕಕಾಲದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದರೂ ಜಿಲ್ಲಾಡಳಿತ ಎದುರಿಸಲು ಸನ್ನದ್ಧವಾಗಿದೆ. ಕಿಮ್ಸ್ ಆಸ್ಪತ್ರೆಗೆ ಹೊಸದಾಗಿ 30 ವೆಂಟಿಲೇಟರ್ ಬಂದಿವೆ. ಮೊದಲಿನ 40 ವೆಂಟಿಲೇಟರ್ ನಲ್ಲಿ 17 ವೆಂಟಿಲೇಟರ್ ಗಳನ್ನು ಸದ್ಯ ರೋಗಿಗಳ ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಒಟ್ಟು 53 ವೆಂಟಿಲೇಟರ್ ಗಳು ಬಳಕೆಗೆ ಸಿದ್ದ ಇವೆ. ರೈಲ್ವೇ ಐಸೋಲೇಷನ್ ಬೋಗಿಗಳನ್ನು ಅಗತ್ಯ ಸಂದರ್ಭ ಬಂದಾಗ ಉಪಯೋಗಿಸಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಗಳ ಕೊರೆತೆ ಇಲ್ಲ ಎಂದು ಹೇಳಿದರು‌‌.

ಈ ಸಂದರ್ಭದಲ್ಲಿ ಶಾಸಕ ಅರವಿಂದ್ ಬೆಲ್ಲದ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಡಿಸಿಪಿ ಕೃಷ್ಣಕಾಂತ್, ಉಪವಿಭಾಗ ಅಧಿಕಾರಿ ಮಹಮದ್ ಜುಬೇರ್, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ್ ನಾಸಿ, ಹುಬ್ಬಳ್ಳಿ ಐಎಂಎ ಅಧ್ಯಕ್ಷ ಡಾ. ಕ್ರಾಂತಿ ಕಿರಣ್, ಡಾ. ಅಶೋಕ್ ಬಂಗಾರ ಶೆಟ್ಟರ್, ದೇಶಪಾಂಡೆ ಪೌಂಡೇಷನ್‌ನ ವಿವೇಕ್ ಪವಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *