ಕೇಬಲ್‌ಗೆ ಸಿಕ್ಕು ಹಾರಿ ಬಿದ್ದ ಆಟೋ ಡ್ರೈವರ್: ಭಯಾನಕ ವೀಡಿಯೋ ಇಲ್ಲಿದೆ ನೋಡಿ…
ಕೋಲಾರ: ಜೋತುಬಿದ್ದ ಕೇಬಲ್‌ಗೆ ಕಾಲು ಸಿಕ್ಕು ತೆಗೆದುಕೊಳ್ಳುವಷ್ಟರಲ್ಲೇ ಮೂವತ್ತು ಅಡಿಯಷ್ಟು ಹಾರಿ ಹೋಗಿ ಮಹಿಳೆಯ ಮೇಲೆ ಬಿದ್ದ ಘಟನೆ ಕೋಲಾರದ ಹೊರವಲಯದ ಕೊಂಡರಾಜನಹಳ್ಳಿ ಬಳಿ ಸಂಭವಿಸಿದೆ.
ಆಟೋ ನಿಲ್ಲಿಸಿ ಗ್ರಾಹಕರಿಗೆ ಚಿಲ್ಲರೇ ಕೊಡಲು ಕೆಳಗಿಳಿದು ಮತ್ತೆ ಆಟೋದ ಒಳಗೆ ಹೋಗುವಾಗ ಕೇಬಲ್ ಸಿಕ್ಕು ಹಕ್ಕಿಯಂತೆ ಹಾರಿ ಮಹಿಳೆಯ ಮೇಲೆ ಬಿದ್ದಿದ್ದಾನೆ.
ತೀವ್ರವಾಗಿ ರಭಸದಿಂದ ಬರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ದೃಶ್ಯ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ.
ಘಟನೆಯಲ್ಲಿ ಆಟೋ ಡ್ರೈವರ ಹಾಗೂ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.